ಸುಶಾಂತ ಸಾವಿನ ಪ್ರಕರಣ: ಸುಪ್ರೀಂ ಮಹತ್ವದ ತೀರ್ಪು

322

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನವದೆಹಲಿ: ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಪ್ರಕರಣ ಸಂಬಂಧ, ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಸುಶಾಂತ ಕುಟುಂಬಸ್ಥರು ಸಿಬಿಐಗೆ ವಹಿಸಬೇಕೆಂದು ಕೇಳುತ್ತಾ ಬಂದಿದ್ರು. ಅದಕ್ಕೆ ಇದೀಗ ಮನ್ನಣೆ ಸಿಕ್ಕಿದೆ. ಸುಪ್ರೀಂ ಕೋರ್ಟ್ ಸಹ ಈ ಪ್ರಕರಣವನ್ನ ಸಿಬಿಐಗೆ ವಹಿಸಲು ತೀರ್ಪು ನೀಡಿದೆ.

ರಿಯಾ ಚಕ್ರವರ್ತಿ ಸಲ್ಲಿಸಿದ್ದ ಪಿಟಿಷನ್ ನಲ್ಲಿದ್ದ ಅಂಶವನ್ನ ತಳ್ಳಿಹಾಕಿದ ಕೋರ್ಟ್, ಈ ಪ್ರಕರಣವನ್ನ ಸಿಬಿಐಗೆ ವಹಿಸುವ ಅಧಿಕಾರಿ ಬಿಹಾರ ಸರ್ಕಾರಕ್ಕಿದೆ. ಸಿಬಿಐ ತನಿಖೆಯಲ್ಲಿ ಮಹಾರಾಷ್ಟ್ರ ಸರ್ಕಾರ ಸಹಕರಿಸಬೇಕೆಂದು ಆದೇಶಿಸಿದೆ. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಹಾಗೂ ಇತರರಿಗೆ ಇದರಿಂದ ಹಿನ್ನೆಡೆಯಾಗಿದೆ.

34 ವರ್ಷದ ನಟ ಸುಶಾಂತ ಜೂನ್ 14ರಂದು ಅನುಮಾನಸ್ಪದರ ರೀತಿಯಲ್ಲಿ ಸಾವನ್ನಪ್ಪಿದ. ಅಲ್ಲಿಂದ ಇಡೀ ಪ್ರಕರಣ ಹಲವರ ಕೊರಳಿಗೆ ಸುತ್ತಿಕೊಂಡಿತು. ಸುಶಾಂತ ಮಾಜಿ ಲವರ್ ರಿಯಾ ಚಕ್ರವರ್ತಿ, ಬಿಟೌನ್ ನಿರ್ದೇಶಕ, ನಟ, ನಟಿಯರು ಸೇರಿದಂತೆ ಅನೇಕರ ಹೆಸರುಗಳು ಕೇಳಿ ಬಂದ್ವು. ಅಂಡರ್ ವರ್ಲ್ಡ್ ಕೈವಾಡ, ಸುಶಾಂತ ಅಕೌಂಟ್ ನಿಂದ 15 ಕೋಟಿ ವರ್ಗಾವಣೆ ಆರೋಪ. ಹೀಗೆ ಹಲವು ವಿಚಾರಗಳಿಂದ ಕುಟುಂಬಸ್ಥರು ಸಿಬಿಐಗೆ ಆಗ್ರಹಿಸಿದ್ರು. ಈಗ ಸುಪ್ರೀಂ ಕೋರ್ಟ್ ಸಹ ಸಿಬಿಐಗೆ ವಹಿಸುವಂತೆ ಆದೇಶಿಸಿದೆ.




Leave a Reply

Your email address will not be published. Required fields are marked *

error: Content is protected !!