ಕಾಮ ಕಾವಿ ಬಟ್ಟೆ ತೊಟ್ಟಾಗ…

3420

ಪ್ರಜಾಸ್ತ್ರ ಸುದ್ದಿ

ಧಾರವಾಡ: ಪಂಚೇಂದ್ರಿಯಗಳನ್ನ ತನ್ನ ಮುಷ್ಟಿಯಲ್ಲಿಟ್ಟುಕೊಂಡು ಸಮಾಜಕ್ಕೆ ಜ್ಞಾನದ ಸುಧೆ ಹರಿಸಬೇಕಾದ ಸ್ವಾಮೀಜಿಗಳು ಇಂದು ಪಲ್ಲಂಗದಾಟದಲ್ಲಿ ಸಿಕ್ಕು ಬೀಳ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಳ್ಳ ಕಾಮಿ ಸ್ವಾಮೀಜಿಗಳ ಮುಖವಾಡ ಕಳಚುತ್ತಲೇ ಇವೆ. ಇದೀಗ ಧಾರವಾಡ ಜಿಲ್ಲೆಯ ಸ್ವಾಮೀಜಿಯ ರಾಸಲೀಲೆ ಸದ್ದು ಮಾಡ್ತಿದೆ.

ಧಾರವಾಡ ಜಿಲ್ಲೆಯ  ನವಲಗುಂದ ತಾಲೂಕಿನ ಮಠಾಧೀಶ ಮಹಿಳೆಯೊಂದಿಗೆ ಸರಸ ಸಲ್ಲಾಪವಾಡ್ತಿರುವ ವಿಡಿಯೋ ಲೀಕ್ ಆಗಿದೆ. ಪ್ರತಿಷ್ಠಿತ ಮಠದ ಸ್ವಾಮಿಜೀಯ ಕಾಮದ ವಿಡಿಯೋ ವೈರಲ್ ಆಗಿದೆ. ಇದರ ಜೊತೆಗೆ ಮತ್ತೊಬ್ಬ ಸ್ವಾಮೀಜಿಯ ಆಡಿಯೋ ಲೀಕ್ ಆಗಿದ್ದು, 15 ನಿಮಿಷದ ಸಂಭಾಷಣೆಯಲ್ಲಿ ಮೂರು ಸ್ವಾಮೀಜಿಗಳ ಹೆಸರು ಪ್ರಸ್ತಾಪವಾಗಿದೆ. ಇದರ ಜೊತೆಗೆ ಮಾಂಸ, ಮದ್ಯ ಸೇವನೆ ಬಗ್ಗೆ ಸಹ ಮಾತ್ನಾಡಲಾಗಿದೆ.

ಕಾಮ ಯಾರನ್ನೂ ಬಿಟ್ಟಿಲ್ಲ. ಎಲ್ಲರನ್ನೂ ತನ್ನ ಜಾಲಕ್ಕೆ ಸಿಲುಕಿಸಿಕೊಂಡಿದೆ. ಆದ್ರೆ, ಇದನ್ನ ಮೀರಿ ದೈವವನ್ನ ಸಾಕ್ಷಾತ್ಕರಿಸಿಕೊಂಡು ಎಲ್ಲರಿಗೂ ಸನ್ಮಾರ್ಗ ತೋರಬೇಕಾದ ಸ್ವಾಮೀಜಿಗಳ ಪಂಚೆ ಸಹ ನಿಲ್ಲುತ್ತಿಲ್ಲ. ಎಲ್ಲಿ ಬೇಕು ಅಲ್ಲಿ ಆ ಪಂಚಿ ಕಚ್ಚಿ ಉದುರಿಬೀಳುತ್ತಿದೆ. ಇಂಥಾ ನೀಚರಿಂದಾಗಿ ಕಾವಿ ಪರಂಪರೆಗೆ ಕಪ್ಪು ಮಸಿ ಬಳಿದು, ಜನರು ಮಠಗಳು, ಸ್ವಾಮೀಜಿಗಳು ಅಂದ್ರೆ ಕ್ಯಾಕರಿಸಿ ಉಗಿಯುವಂತೆ ಮಾಡ್ತಿರುವುದು ನಿಜಕ್ಕೂ ದುರಂತ.




Leave a Reply

Your email address will not be published. Required fields are marked *

error: Content is protected !!