ಕೋವಿಡ್ 19 ಪಟ್ಟಿಯಲ್ಲಿ 3ನೇ ಸ್ಥಾನದತ್ತ ಭಾರತ.. ಪ್ರಧಾನಿ ಮೌನ…

395

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಬರೋಬ್ಬರಿ 11, 458 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ ಅನ್ನೋದಕ್ಕೆ ದಿನದಿಂದ ದಿನಕ್ಕೆ ಸಾಕ್ಷಿಯಾಗ್ತಿದೆ. ಇಷ್ಟಾದ್ರೂ ಸರ್ಕಾರ ಹಾಗೂ ಜನರು ಎಚ್ಚೆತ್ತುಕೊಳ್ತಿಲ್ಲ.

ಇದೀಗ ವಿಶ್ವದಲ್ಲಿ ನಾಲ್ಕನೇ ಸ್ಥಾನಕ್ಕೆ ಬಂದಿರುವ ಭಾರತದಲ್ಲಿ 309,603 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದುವರೆಗೂ 8,890 ಜನರು ಸಾವನ್ನಪ್ಪಿದ್ದಾರೆ. 1,54,330 ಜನರು ಗುಣಮುಖರಾಗಿದ್ದಾರೆ. ಇನ್ನು 1,46,383 ಪ್ರಕರಣಗಳು ಸಕ್ರಿಯವಾಗಿವೆ.

ವಿಶ್ವದಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಇಲ್ಲಿ 21,16,922 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 1,16,825 ಜನರು ಸಾವನ್ನಪ್ಪಿದ್ದಾರೆ. ಇನ್ನು ಬ್ರೆಜಿಲ್ 2ನೇ ಸ್ಥಾನದಲ್ಲಿದೆ. ಇಲ್ಲಿ 8,29,902 ಜನರಲ್ಲಿ ಸೋಂಕು ಇದೆ. 41,901 ಜನರು ಸಾವನ್ನಪ್ಪಿದ್ದಾರೆ. 3ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 5,11,423 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 6,715 ಜನರು ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಸಧ್ಯದ ಪರಿಸ್ಥಿತಿ ನೋಡಿದ್ರೆ ಜೂನ್ ತಿಂಗಳಾಂತ್ಯಕ್ಕೆ ರಷ್ಯಾವನ್ನು ಮೀರಿಸಿ ಮೂರನೇ ಸ್ಥಾನಕ್ಕೆ ಭಾರತ ಬರುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ, ದಿನಕ್ಕೆ 11 ಸಾವಿರ ಮೇಲೆ ಸೋಂಕಿತರ ಸಂಖ್ಯೆ ದಾಟಿದ್ರೆ ಖಂಡಿತವಾಗಿ 3ನೇ ಸ್ಥಾನಕ್ಕೆ ಬರುತ್ತೆ. ಆರಂಭದಲ್ಲಿ ಕರೋನಾ ವಾರಿಯರ್ಸ್ ಗೆ ಗೌರವ ಸಲ್ಲಿಸಿ ಎಂದು ಹೇಳಿದ ಪ್ರಧಾನಿ ಮೋದಿ, ಇದೀಗ ಲಕ್ಷ ಲಕ್ಷ ಸೋಂಕಿತರಿದ್ರೂ ಈ ಬಗ್ಗೆ ಮಾತ್ನಾಡ್ತಿಲ್ಲ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.




Leave a Reply

Your email address will not be published. Required fields are marked *

error: Content is protected !!