ಅಧಿಕಾರ ವಹಿಸಿಕೊಂಡ ಕೆಲ ಗಂಟೆಗಳಲ್ಲೇ ಸ್ವೀಡನ್ ಮೊದಲ ಮಹಿಳಾ ಪ್ರಧಾನಿ ರಾಜೀನಾಮೆ

240

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಕೋಪನ್ ಹೇಗ್: ಸ್ವೀಡನ್ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಮ್ಯಾಗ್ಡಲೀನಾ ಅಂಡರ್ಸನ್ ರಾಜೀನಾಮೆ ನೀಡಿದ್ದಾರೆ. ಮೊದಲ ಮಹಿಳಾ ಪ್ರಧಾನಿಯಾಗಿ ಇತಿಹಾಸ ನಿರ್ಮಿಸಿದ್ದ ಮ್ಯಾಗ್ಡಲೀನಾ ಕೆಲ ಗಂಟೆಗಳಲ್ಲಿಯೇ ರಾಜೀನಾಮೆ ಸಲ್ಲಿಸಿದ್ದಾರೆ.

ಮ್ಯಾಗ್ಡಲೀನಾ ಸಮಿಶ್ರ ಸರ್ಕಾರದಲ್ಲಿದ್ದಾಗ ಹಣಕಾಸು ಸಚಿವೆಯಾಗಿದ್ದರು. ಆಗ ಮಂಡಿಸಿದ್ದ ಬಜೆಟ್ ನ್ನು ಸಂಸತ್ ಅಂಗೀಕರಿಸಿರಲಿಲ್ಲ. ಇದರಿಂದಾಗಿ ಮೈತ್ರಿ ಪಕ್ಷದಿಂದ ಹೊರ ನಡೆಯುತ್ತಿರುವುದಾಗಿ ಗ್ರೀನ್ಸ್ ಪಕ್ಷ ಘೋಷಿಸಿತು. ಹೀಗಾಗಿ ಸೋಷಿಯಲ್ ಡೆಮ್ರಾಟಿಕ್ ಪಕ್ಷದ ನೂತನ ಅಧ್ಯಕ್ಷರಾಗಿ ಪ್ರಧಾನಿಯಾಗಿದ್ದ ಮ್ಯಾಗ್ಡಲೀನಾ ರಾಜೀನಾಮೆ ಸಲ್ಲಿಸಿದ್ದಾರೆ.

ಸ್ವೀಡನ್ ಸಂಸತ್ 349 ಸದಸ್ಯರನ್ನು ಹೊಂದಿದೆ. ಮ್ಯಾಗ್ಡಲೀನಾ ಪರವಾಗಿ 117 ಸದಸ್ಯರು, ವಿರೋಧವಾಗಿ 174 ಸದಸ್ಯರು ಮತ ಚಲಾಯಿಸಿದರು. 57 ಸದಸ್ಯರು ಮತದಾನದಿಂದ ದೂರ ಉಳಿದರು. ಓರ್ವ ಸದಸ್ಯ ಗೈರಾಗಿದ್ದರು. ಇದರಿಂದಾಗಿ 36 ಪುರುಷರು ಪ್ರಧಾನಿಯಾದ ನಂತರ ಮೊದಲ ಮಹಿಳಾ ಪ್ರಧಾನಿ ಅನ್ನೋ ಇತಿಹಾಸ ನಿರ್ಮಿಸಿದ 54 ವರ್ಷದ ಮ್ಯಾಗ್ಡಲೀನಾ ಕೆಲ ಗಂಟೆಗಳಲ್ಲೇ ರಾಜೀನಾಮೆ ಸಲ್ಲಿಸಬೇಕಾಗಿರುವುದು ನಿಜಕ್ಕೂ ದುರಂತ.




Leave a Reply

Your email address will not be published. Required fields are marked *

error: Content is protected !!