‘ಸೈರಾ’ ಕನ್ನಡ ಟೀಸರ್ ಔಟ್: ಶುಭ ಕೋರಿದ ಕಿಚ್ಚ

403

ಮೆಗಾ ಸ್ಟಾರ್ ಚಿರಂಜೀವಿ ನಟಿಸಿರುವ ಸೈರಾ ನರಸಿಂಹರೆಡ್ಡಿ ಚಿತ್ರದ ಕನ್ನಡ ವರ್ಸನ್ ಟೀಸರ್ ರಿಲೀಸ್ ಆಗಿದೆ. ಚಿರಂಜೀವಿ ನಟನೆಯ 151ನೇ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದ್ದು, ಸಿನ್ಮಾ ಕನ್ನಡದಲ್ಲಿಯೂ ಬರುವುದು ಪಕ್ಕಾ ಆಗಿದೆ.

ತೆಲುಗು, ತಮಿಳು ಸೇರಿದಂತೆ ಕನ್ನಡದಲ್ಲಿಯೂ ಸಿನ್ಮಾ ತೆರೆಗೆ ಬರ್ತಿದೆ. ಬ್ರಿಟಿಷರ ವಿರುದ್ಧ ಹೋರಾಡಿದ ನರಸಿಂಹರೆಡ್ಡಿಯ ಜೀವನ ಚರಿತ್ರೆ ಆಧರಿಸಿದ ಸಿನ್ಮಾದಲ್ಲಿ ಕಿಚ್ಚ ಸುದೀಪ, ಬಿಟೌನ್ ಬಿಗ್ ಬಿ ಅಮಿತಾಭ ಬಚ್ಚನ, ಸೇತುಪತಿ, ನಟಿಯರಾದ ನಯನತಾರಾ, ತಮನ್ನಾ ಬಾಟಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸರೇಂದ್ರ ರೆಡ್ಡಿ ನಿರ್ದೇಶನದ ಸಿನ್ಮಾಗೆ ರಾಮಚರಣ ಬಂಡವಾಳ ಹೂಡಿದ್ದಾರೆ. ಇದೇ ಅಕ್ಟೋಬರ್ 2ರಂದು ಚಿತ್ರ ವರ್ಲ್ಡ್ ವೈಡ್ ತೆರೆಗೆ ಬರ್ತಿದೆ. ನಟ ಕಿಚ್ಚ ಸುದೀಪ ಚಿತ್ರಕ್ಕೆ ಶುಭ ಕೋರಿದ್ದಾರೆ.




Leave a Reply

Your email address will not be published. Required fields are marked *

error: Content is protected !!