ಉತ್ತರ ಭಾರತದಲ್ಲಿ ಮುಂದುವರೆದ ಪ್ರವಾಹ

415

ಉತ್ತರ ಭಾರತದಲ್ಲಿ ಪ್ರವಾಹದ ಸ್ಥಿತಿ ಮುಂದುವರೆದಿದೆ. ಹರಿಯಾಣ, ಪಂಜಾಬ್, ಹಿಮಾಚಲಪ್ರದೇಶ, ಉತ್ತರಾಖಂಡ, ಜಮ್ಮು-ಕಾಶ್ಮೀರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಪ್ರವಾಹ ಇನ್ನು ನಿಂತಿಲ್ಲ. ಮಳೆ ನಿಂತರೂ ಹರಿದು ಬರ್ತಿರುವ ನೀರು ಮಾತ್ರ ನಿಲ್ಲುತ್ತಿಲ್ಲ.

ಪಂಜಾಬ್, ಹರಿಯಾಣಗಳಲ್ಲಿನ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹೀಗಾಗಿ ರೂಪ್ ನಗರ, ಜಲಂಧರ್ ಹಾಗೂ ಲೂಧಿಯಾನ ಸೇರಿ ಅನೇಕ ಗ್ರಾಮಗಳು ಜಲಾವೃತಗೊಂಡಿವೆ. ಹೀಗಾಗಿ ಜನರಿಗೆ ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ.

ಇನ್ನು ಉತ್ತಾರಖಂಡದಲ್ಲಿಯೂ ಮಳೆ ಅಬ್ಬರ ಮುಂದುವರೆದಿದ್ದು, ಒಂದು ಮತ್ತೊಂದು ಶವ ಪತ್ತೆಯಾಗಿದೆ. ಇದ್ರಿಂದಾಗಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗ್ತಿದ್ದು ರಾಷ್ಟ್ರ ರಾಜಧಾನಿಗೆ ಪ್ರವಾಹದ ಭೀತಿ ಎದುರಾಗಿದೆ.




Leave a Reply

Your email address will not be published. Required fields are marked *

error: Content is protected !!