ಮುಂದುವರೆದ ದಕ್ಷಿಣ ಆಫ್ರಿಕಾದ ಬ್ಯಾಡ್ ಲಕ್

161

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕ್ರಿಕೆಟ್ ಜಗತ್ತಿನಲ್ಲಿ ಒಮ್ಮೆಯೂ ಯಾವುದೇ ಮಾದರಿಯ ವಿಶ್ವಕಪ್, ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿದ ಬಲಿಷ್ಠ ಹಾಗೂ ನತದೃಷ್ಟ ತಂಡ ಅಂದರೆ ಅದು ದಕ್ಷಿಣ ಆಫ್ರಿಕಾ. ಘಟಾನುಘಟಿ ಆಟಗಾರರಿದ್ದಾರೆ. ಉಭಯ ದೇಶಗಳ ಟೂರ್ನಿಯಲ್ಲಿ ಅಬ್ಬರಿಸುವ ಸೌಥ್ ಆಫ್ರಿಕಾ ವರ್ಲ್ಡ್ ಕಪ್ ನಂತಹ ಟೂರ್ನಿಯಲ್ಲಿ ಮುಗ್ಗರಿಸುತ್ತೆ.

ಭಾನುವಾರ ನಡೆದ ಪಂದ್ಯದಲ್ಲಿ ನೆದರ್ಲ್ಯಾಂಡ್ ವಿರುದ್ಧ ಸೋಲುವ ಮೂಲಕ ಟೂರ್ನಿಯಿಂದ ಹೊರ ಬಿದ್ದಿದೆ. ಕ್ರಿಕೆಟ್ ಅಂಗಳದಲ್ಲಿ ಈಗ ಅಂಬೆಗಾಲು ಇಡುತ್ತಿರುವ ತಂಡದ ಎದುರು ಬಲಿಷ್ಠ ತಂಡ ಸೋಲುವ ಮೂಲಕ ಚೋಕರ್ಸ್ ಅನ್ನೋ ಹಣೆಪಟ್ಟಿಯನ್ನು ಮುಂದುವರೆಸಿಕೊಂಡಿದೆ.

ಟಾಸ್ ಗೆದ್ದ ಸೌಥ್ ಆಫ್ರಿಕಾ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕೊಲಿನ್ ಅಜೇಯ 41, ಮೇಬರ್ಗ್ 37, ಕೋಪರ್ 35, ಮ್ಯಾಕ್ಸ್ ವೋಡ್ವಡ್ 29 ರನ್ ಗಳ ಆಟದಿಂದಾಗಿ 4 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿತು. ಆಫ್ರಿಕಾ ಪರ ಕೇಶವ್ ಮಹಾರಾಜ್ 2, ಮಾರ್ಕಮ್, ನೊರ್ಟಜ್ ತಲಾ 1 ವಿಕೆಟ್ ಪಡೆದರು.

ಟಿ-20 ಟೂರ್ನಿಯಲ್ಲಿ 158 ರನ್ ದೊಡ್ಡ ಸ್ಕೋರ್ ಅಲ್ಲವೇ ಅಲ್ಲ. ಅದು ನೆದರ್ಲ್ಯಾಂಡ್ ರೀತಿಯ ಸಣ್ಣ ತಂಡದ ಎದುರು ಸೌಥ್ ಆಫ್ರಿಕಾದಂತಹ ದೈತ್ಯ ತಂಡಕ್ಕೆ ಈ ಸ್ಕೋರ್ ದೊಡ್ಡದಲ್ಲ. ಆದರೆ, ಇವರಿಗೆ ಲಕ್ ಇಲ್ಲ ಅನ್ನೋದಕ್ಕೆ ಸಾಕ್ಷಿ ಎಂಬಂತೆ ಸೌಥ್ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ 13 ರನ್ ಗಳಿಂದ ಸೋಲು ಅನುಭವಿಸಿದೆ. ರೊಸ್ವೊ ಗಳಿಸಿದ 25 ರನ್ ಗರಿಷ್ಠ ಸ್ಕೋರ್ ಆಗಿದೆ. ನೆದರ್ಲ್ಯಾಂಡ್ ಪರ ಗ್ಲೋವರ್ 3, ಕಲ್ಸೀನ್, ಲೀಡ್ ತಲಾ 2 ವಿಕೆಟ್ ಪಡೆದರು. ಮೀರ್ಕನ್ 1 ವಿಕೆಟ್ ಪಡೆದ. ಸೌಥ್ ಆಫ್ರಿಕಾ ಸೋತ ಪರಿಣಾಮ ಪಾಕಿಸ್ಥಾನ ತಂಡ ನೇರ ಸಮಿ ಫೈನಲ್ ಪ್ರವೇಶಿಸಿತು.




Leave a Reply

Your email address will not be published. Required fields are marked *

error: Content is protected !!