ಟಿ-20 ವಿಶ್ವಕಪ್ ಆಡಲು ಬಂದ ಆಟಗಾರ ರೇಪ್ ಕೇಸ್ ನಲ್ಲಿ ಅರೆಸ್ಟ್

180

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್ ನಲ್ಲಿ ಆಡಲು ಬಂದಿರುವ ಶ್ರೀಲಂಕಾ ತಂಡದ ಆಟಗಾರನೊಬ್ಬರ ಅತ್ಯಾಚಾರ ಪ್ರಕರಣದಲ್ಲಿ ಭಾನುವಾರ ಬಂಧನಕ್ಕೆ ಒಳಗಾಗಿದ್ದಾರೆ. ಸಿಡ್ನಿ ಪೊಲೀಸರು ಧನುಷ್ಕ ಗುಣತಿಲಕ ಅವರನ್ನು ಬಂಧಿಸಿದ್ದಾರೆ.

ಸಿಡ್ನಿಯ 29 ವರ್ಷದ ಯುವತಿ ಗುಣತಿಲಕ ಮೇಲೆ ಅತ್ಯಾಚಾರದ ದೂರು ನೀಡಿದ್ದಾಳೆ. ಆನ್ಲೈನ್ ಡೇಟಿಂಗ್ ಆಪ್ ಮೂಲಕ ಯುವತಿ ಸಂಪರ್ಕಕ್ಕೆ ಬಂದಿದ್ದಾಳೆ. ರೋಸ್ ಬೇಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಟೂರ್ನಿಯಿಂದ ಹೊರ ಬಿದ್ದಿರುವ ಶ್ರೀಲಂಕಾ ತಂಡ ಈಗಾಗ್ಲೇ ಆಸ್ಟ್ರೇಲಿಯಾದಿಂದ ತವರಿಗೆ ಮರಳಿದೆ. ಆದರೆ, ಧನುಷ್ಕ ಗುಣತಿಲಕ ಅಲ್ಲಿಯೇ ಉಳಿದಿದ್ದಾರೆ. ಇದರ ಸತ್ಯಾಸತ್ಯತೆ ತನಿಖೆಯಿಂದ ಹೊರ ಬರಬೇಕಿದೆ.




Leave a Reply

Your email address will not be published. Required fields are marked *

error: Content is protected !!