ನ.17ರಂದು ಉಮಾ ಭಾರತಿ ಜೈನ ಧರ್ಮ ಸ್ವೀಕಾರ

200

ಪ್ರಜಾಸ್ತ್ರ ಸುದ್ದಿ

ಭೋಪಾಲ್: ಬಿಜೆಪಿ ಹಿರಿಯ ನಾಯಕಿ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು ಜೈನ ಧರ್ಮ ಸ್ವೀಕಾರಕ್ಕೆ ಸಿದ್ಧವಾಗಿದ್ದಾರೆ. ಕಳೆದ ಎರಡು ದಿನಗಳಿಂದ 27 ಟ್ವೀಟ್ ಗಳನ್ನು ಮಾಡಿದ್ದು, ನವೆಂಬರ್ 17ರಂದು ಅಧಿಕೃತವಾಗಿ ಎಲ್ಲ ಸಂಬಂಧಗಳನ್ನು ತೊರೆಯುವುದಾಗಿ ಹೇಳಿದ್ದಾರೆ.

ಕರ್ನಾಟಕ ಮೂಲದ ಜೈನ ಗುರು ಸಂತ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಅವರ ಆದೇಶದಂತೆ ನಡೆದುಕೊಳ್ಳುತ್ತಿದ್ದೇನೆ. ನನ್ನ ಕುಟುಂಬದ ಎಲ್ಲ ಸಂಬಂಧಗಳು, ನನ್ನ ಎಲ್ಲ ಬಂಧಗಳಿಂದ ತೊರೆದುಕೊಳ್ಳುತ್ತಿದ್ದೇನೆ. ಈಗ ನಾನು ದೀದಿ ಮಾ ಎಂದಿದ್ದಾರೆ.

ತಮಗೆ ಇಲ್ಲಿಯವರೆಗೂ ಬೆಂಬಲ ನೀಡಿದ, ಸಹಕಾರ ನೀಡಿದ ಪ್ರತಿಯೊಬ್ಬರು ಧನ್ಯವಾದಗಳು. ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತದಲ್ಲಿ ನಾನು ಸಾಕಷ್ಟು ಸುಳ್ಳು ಪ್ರಕರಣಗಳಲ್ಲಿ ಹಿಂಸೆಯನ್ನು ಅನುಭವಿಸಿದ್ದೇನೆ ಎಂದಿದ್ದಾರೆ. ಸಕ್ರಿಯ ರಾಜಕಾರಣದಿಂದ ದೂರು ಉಳಿದಿರುವ ಉಮಾ ಭಾರತಿ ಅವರ ಮೂಲ ಹೆಸರು ಉಮಾಶ್ರೀ ಭಾರತಿ.

ನವೆಂಬರ್ 17, 1997ರಲ್ಲಿ ಅಮರ್ ಕಂಟಕ್ ನಲ್ಲಿ ಹಿಂದೂ ಧರ್ಮದ ಅನುಸಾರ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. ಆಗ ಅವರು ಉಮಾ ಭಾರತಿ ಆದರು. ಹಿಂದೂ ಧರ್ಮದ ಸನ್ಯಾಸತ್ವ ಸ್ವೀಕರಿಸಿ 25 ಅರ್ಷಗಳ ನಂತರ ಜೈನ ಧರ್ಮದ ಸನ್ಯಾಸತ್ವ ಸ್ವೀಕಾರಕ್ಕೆ ಸಿದ್ಧವಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!