ಇಂಗ್ಲೆಂಡ್ ಗೆ 138 ರನ್ ಟಾರ್ಗೆಟ್

247

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಐಸಿಸಿ ಟಿ-20 ವರ್ಲ್ಡ್ ಕಪ್ ಫೈನಲ್ ಪಂದ್ಯ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿದೆ. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಪಾಕ್ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು.

ಮೊಹಮ್ಮದ್ ರಿಜ್ವಾನ್ 15, ನಾಯಕ ಬಾಬರ್ ಅಜಂ 32, ಮೊಹಮ್ಮದ್ ಹ್ಯಾರಿಸ್ 8, ಶಾನ್ ಮಸೋದ್ 38, ಇಪ್ತಾಕರ್ ಅಹ್ಮದ್ 0, ಶಹಬಾದ್ ಖಾನ್ 20, ನವಾಜ್ 5, ವಾಸೀಂ 4 ರನ್ ಗಳಿಸಿ ಔಟ್ ಆದರು. ಶಾಹಿನ್ ಅಫ್ರಿದಿ ಅಜೇಯ 5, ಹ್ಯಾರಿಸ್ ರೌಫ್ ಅಜೇಯ 1 ರನ್ ಗಳಿಸಿದರು.

ಇಂಗ್ಲೆಂಡ್ ಪರ ಸ್ಯಾಮ್ ಕರನ್ 3, ಆದಿಲ್ ರಶೀದ್, ಕ್ರಿಸ್ ಜೋರ್ಡಾನ್ ತಲಾ 2 ವಿಕೆಟ್ ಪಡೆದರು. ಬೆನ್ ಸ್ಟೋಕ್ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!