ನಮಿಬಿಯಾ ಎದುರು ಸೋತ ಏಷ್ಯಾ ಚಾಂಪಿಯನ್ಸ್

228

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮೆಲ್ಬರ್ನ್: ಭಾನುವಾರದಿಂದ ಟಿ-20 ವರ್ಲ್ಡ್ ಕಪ್ ಟೂರ್ನಿ ಶುರುವಾಗಿದ್ದು ಎ ಗುಂಪಿನ ಮೊದಲ ಪಂದ್ಯದಲ್ಲಿ ಏಷ್ಯಾ ಚಾಂಪಿಯನ್ಸ್ ಆಗಿರುವ ಶ್ರೀಲಂಕಾ ನಮಿಬಿಯಾ ಎದುರು ಸೋಲು ಅನುಭವಿಸಿದೆ.

ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಜಾನ್ ಫ್ರೈಲಿಂಕ್ 42 ಹಾಗೂ ಜೆ.ಜೆ ಸ್ಮಿತ್ 31 ರನ್ ಗಳ ಆಟದಿಂದ 7 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಪ್ರಮೋದ್ ಮಧುಸುದನ್ 2, ತೀಕ್ಷ್ಣಾ, ಚಮೇರಾ, ಕುರನರತ್ನೆ ಹಾಗೂ ಹಸರಂಗ ತಲಾ 1 ವಿಕೆಟ್ ಪಡೆದರು.

ಈ ಸ್ಕೋರ್ ಬೆನ್ನು ಹತ್ತಿದ ಲಂಕಾ ಪಡೆ ನಮಿಬಿಯಾ ಬೌಲಿಂಗ್ ಎದುರು ಮಂಕಾಗಿ 108 ರನ್ ಗಳಿಗೆ ಆಲೌಟ್ ಆಯಿತು. ನಾಯಕ ಶನಕ್ 29 ಹಾಗೂ ರಾಜಪಕ್ಷ 20 ರನ್ ಗಳು ಗರಿಷ್ಟವಾಗಿವೆ. ನಮಿಬಿಯಾ ಪರ ವೈಸ್, ಸ್ಕಾಟ್ಜ್, ಶಿಕಿಂಗೊ, ಫ್ರೈಲಿಂಕ್ ತಲಾ 2 ವಿಕೆಟ್ ಪಡೆದರು. ಜೆ.ಜೆ ಸ್ಮಿತ್ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!