ಶರಣ ತತ್ವ, ಭಾವೈಕ್ಯತೆಯ ವಿಶ್ವ ಧರ್ಮ: ಮಾಹಾದೇವಪ್ಪ ಉಪ್ಪಿನ

238

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಚಿಟಗುಪ್ಪ: ಶರಣ ತತ್ವ ಜಾಗತಿಕ ಮಟ್ಟಕ್ಕೆ ಸಮಾನತೆ, ಸಹೋದರತ್ವ, ಭಾವೈಕ್ಯತೆ, ಸೌಹಾರ್ದತೆ ಸೇರಿದಂತೆ ಮಹಿಳೆಯರಿಗೆ ಮೊದಲು ಸ್ವಾತಂತ್ರ್ಯ ನೀಡಿದ ವಿಶ್ವ ಧರ್ಮವಾಗಿದೆ ಎಂದು ಸಾಹಿತಿ, ಪ್ರಗತಿಪರ ಚಿಂತಕ ಮಾಹಾದೇವಪ್ಪ ಉಪ್ಪಿನ ನುಡಿದರು.

ನಗರದ ಸರಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಜಾನಪದ ಪರಿಷತ್ತು ಚಿಟಗುಪ್ಪ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಬೀದರ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಷತ್ತಿನ ಸಂಸ್ಥಾಪನಾ ದಿನ ಮತ್ತು ಸಂಸ್ಥಾಪಕರಾದ ಲಿಂ.ಪೂಜ್ಯ ಶ್ರೀ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಜನ್ಮದಿನ, ದತ್ತಿ ಉಪನ್ಯಾಸ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಶರಣರ ದೃಷ್ಟಿಯಲ್ಲಿ ಧರ್ಮ’ ಎಂಬ ವಿಶೇಷ ವಿಷಯದ ಮೇಲೆ ಉಪನ್ಯಾಸ ನೀಡಿದರು.

ತನ್ನನ್ನು ತಾನು ಅರಿತುಕೊಂಡು ಸಮಾಜ ತಿದ್ದುವ ಕೆಲಸ ವ್ಯವಸ್ಥಿತವಾಗಿ ಬಸವಣ್ಣನವರ ಮಾಡಿದ್ದಾರೆ. ಶರಣರು ಲಿಂಗಾಯತ ಧರ್ಮಕ್ಕೆ ಹೊಸ ವ್ಯಾಖ್ಯೆ ಬರೆದು, ಧರ್ಮವೆಂದರೆ ಪಾರಲೌಕಿಕಕ್ಕೆ ಮಾತ್ರ ಸೀಮಿತವಾದುದಲ್ಲ. ಅದು ಇಹಲೋಕಕ್ಕೂ ಸಂಬಂದಿಸಿದ್ದೆಂದು ಹೇಳಿದ್ದಾರೆ ಎಂದರು.

ಬಸವ ತತ್ವ ಪ್ರಚಾರಕರು, ಪ್ರಗತಿಪರ ಚಿಂತಕಿ ಇಂದುಮತಿ ಗಾರಂಪಳ್ಳಿಯವರು ಸಾನಿಧ್ಯ ವಹಿಸಿ ಮಾತನಾಡಿ, ಶರಣರ ದೃಷ್ಟಿಯಲ್ಲಿ ನಿಜವಾದ ಧರ್ಮವೆಂದರೇ ಅದು ನಿಜವಾದ ಸಾಮಾಜಿಕವೇ ಆಗಿತ್ತು. ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ ಎಂಬ ಬಸವಣ್ಣನವರ ನುಡಿ ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ ಅಂತಾ ಹೇಳಿದರು.

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಪ್ಪ ಜಮಾದಾರ, ಸರ್ಕಾರಿ ಕನ್ಯಾ ಪ್ರೌಢಶಾಲೆ ಮುಖ್ಯೋಪಾಧ್ಯಕ್ಷರಾದ ಸರುಬಾಯಿ ಪವಾರ, ನಿವೃತ್ತ ಸಹಾಯಕ ಆಯುಕ್ತರಾದ ದಯಾನಂದ ಕಾಂಬ್ಳೆ, ಶರಣ ತತ್ವ ಪ್ರಚಾರಕ ಚಂದ್ರಶೇಖರ ತಂಗಾ, ಸಮಾಜ ಸೇವಕರಾದ ಅಸಲಂಮಿಯಾ ಆಜಾಮ್ ಶರಣರ ತತ್ವದ ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಂಗಮೇಶ ಎನ್ ಜವಾದಿಯವರು ಮಾತನಾಡಿ, ಶರಣರ ದೃಷ್ಟಿಯಲ್ಲಿ ಧರ್ಮವೆಂದರೆ ಸಮಾನತೆ ಸಾರುತ್ತ ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಮಾನ ಹಕ್ಕುಗಳನ್ನು, ತತ್ವಗಳನ್ನು ಎತ್ತಿಹಿಡಿಯುವ ಮೂಲಕ ತುಳಿತಕ್ಕೋಳಗಾದ ದೀನ ದಲಿತರಿಗೆ, ಅಸ್ಪೃಶ್ಯರಿಗೆ ಅವಕಾಶ ನೀಡುವ ಕ್ರಾಂತಿಕಾರಕ ವಿಚಾರಗಳ ಮನುಷ್ಯತ್ವದ ಧರ್ಮವಾಗಿದೆ ಎಂದರು. ಇದೆ ಸಂದರ್ಭದಲ್ಲಿ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ, ಆಯ್ಕೆಯಾದ ಎಲ್ಲಾ ಮಕ್ಕಳಿಗೂ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು

ಶಿಕ್ಷಕರಾದ ಗುಂಡಪ್ಪಾ ಕೋರಿ, ಮಶ್ವಲೀನ್, ಸೈಯದ್ ಆಪ್ರೀನ್, ಧನರಾಜ್, ಹಸನ್, ಅನ್ನಪೂರ್ಣ, ಪಂಚಶೀಲಾ, ರೇವಣ್ಣಸಿದ್ದಪ್ಪ ಸಜ್ಜನ್, ಸಾಹಯಕಿ ಮಲ್ಲಮ್ಮ, ಪರಿಷತ್ತಿನ ಪದಾಧಿಕಾರಿಗಳು ಮತ್ತು ಮಕ್ಕಳು ಹಾಜರಿದ್ದರು. ಬಸವರಾಜ ಮೇತ್ರೆ ನಿರೂಪಿಸಿದರು. ಸಂಜೀವನ ಭೋಸ್ಲೆ ಸ್ವಾಗತಿಸಿದರು. ಅಂಬಿಕಾ ಮಾಡಿಗೆ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!