ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಚಿತ್ರರಂಗದಿಂದ ನಟಿ ರಮ್ಯಾ ದೂರವಾಗಿ ರಾಜಕೀಯದಲ್ಲಿ ಸಕ್ರಿಯರಾದರು. ಎಂಪಿ ಆದರು. ನಂತರ ರಾಜಕೀಯ ಚಟುವಟಿಕೆಗಳಿಂದಲೂ ದೂರವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಆದರೆ, ಇಂದಿಗೂ ಅವರ ಬಗ್ಗೆ ಇರುವ ಅಭಿಯಾನ ಫ್ಯಾನ್ಸ್ ಗೆ ಕಡಿಮೆಯಾಗಿಲ್ಲ. ಇಂತಹ ನಟಿ, ರಾಜಕಾರಣಿ ಬುಧವಾರ ಸಿಹಿ ಸುದ್ದಿಯೊಂದು ನೀಡಲಿದ್ದಾರೆ.
ನಾನು ಕೈಗೊಳ್ಳುವ ನಿರ್ಧಾರಗಳ ಬಗ್ಗೆ ನೀವು ಯೋಚಿಸುವುದಿಲ್ಲವೇ ಎಂದು ಪ್ರಶ್ನಿಸುವುದರ ಜೊತೆಗೆ ನಾಳೆ 11.15ಕ್ಕೆ ನಿಮಗೊಂದು ಸಿಹಿ ಸುದ್ದಿ ನೀಡಲಿದ್ದೇನೆ. ಇದು ಅಧಿಕೃತವಾಗಿರಲಿದೆ ಎಂದಿದ್ದಾರೆ.
ನಟಿ ರಮ್ಯಾ ಟ್ವೀಟ್ ಗೆ ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಮದುವೆ, ಸಿನಿಮಾ ವಿಚಾರವೇ ಎಂದು ಪ್ರಶ್ನಿಸಿದ್ದಾರೆ. ರಾಜಕೀಯದ ವಿಷಯವೇ ಎಂದು ಕೇಳಿದ್ದಾರೆ. ಎಲ್ಲರ ಪ್ರಶ್ನೆಗಳಿಗೆ ನಾಳೆ 11.15ಕ್ಕೆ ಉತ್ತರ ಸಿಗಲಿದೆ.