ಚುನಾವಣೆ ಅಖಾಡಕ್ಕಿಳಿದ ಕಮಲ್ ಹಾಸನ್ ಆಸ್ತಿ ಎಷ್ಟು?

316

ಪ್ರಜಾಸ್ತ್ರ ಸುದ್ದಿ

ಚೆನ್ನೈ: ಮಕ್ಕಳ್ ನೀಧಿ ಮಯಾಂ ಪಕ್ಷದ ಮೂಲಕ ರಾಜಕೀಯ ಜೀವನಕ್ಕೆ ಎಂಟ್ರಿ ಕೊಟ್ಟಿರುವ ಹಿರಿಯ ನಟ ಕಮಲ್ ಹಾಸನ್, ತಮ್ಮ ಆಸ್ತಿಯ ಅಫಿಡವಿಟ್ ಸಲ್ಲಿಸಿದ್ದಾರೆ. ಕೊಯಮತ್ತೂರು ದಕ್ಷಿಣ ಕ್ಷೇತ್ರದಲ್ಲಿ ಕಮಲ್ ಹಾಸನ್ ಸ್ಪರ್ಧೆ ಮಾಡುತ್ತಿದ್ದಾರೆ.

ಈಗಾಗ್ಲೇ ನಾಮಪತ್ರ ಸಲ್ಲಿಕೆ ಮಾಡಿರುವ ಕಮಲ್ ಹಾಸನ್ ಒಟ್ಟು ಆಸ್ತಿಯ ಮೌಲ್ಯ 176.9 ಕೋಟಿ ರೂಪಾಯಿ ಆಗಿದೆ. ಚರಾಸ್ತಿ 45 ಕೋಟಿ, ಸ್ಥಿರಾಸ್ತಿ 131.8 ಕೋಟಿ ರೂಪಾಯಿ ಇದೆ. ಇದರಲ್ಲಿ ಪತ್ನಿ ಹಾಗೂ ಮಕ್ಕಳ ಆಸ್ತಿಯ ಬಗ್ಗೆ ಉಲ್ಲೇಖಿಸಿಲ್ಲ. ಅವರು ಇವರನ್ನ ಅವಲಂಬಿತರಿಲ್ಲವೆಂದು ತಿಳಿಸಿದ್ದಾರೆ.

ಕಮಲ್ ಹಾಸನ್ ಮೊದಲ ಪತ್ನಿ ವಾಣಿ ನಿಧನ ಹೊಂದಿದ್ದಾರೆ. ಸಾರಿಕಾ ಜೊತೆ ಡಿವೋರ್ಸ್ ಪಡೆದಿದ್ದಾರೆ. ನಟಿ ಗೌತಮಿ ಜೊತೆಗೆ ಲಿವಿಂಗ್ ಟು ಗೆದರ್ ಸಂಬಂಧ ಹೊಂದಿದ್ದರು. ಸಾರಿಕಾರಿಂದ ಪಡೆದ ಶ್ರುತಿ ಹಾಗೂ ಅಕ್ಷರ ಮಕ್ಕಳು ಸಹ ತಮ್ಮ ಮೇಲೆ ಅವಲಂಬಿತರಾಗಿಲ್ಲವೆಂದು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!