154 ಕ್ಷೇತ್ರಗಳಲ್ಲಿ ಕಮಲ್ ಪಕ್ಷದ ಅಭ್ಯರ್ಥಿಗಳು

248

ಪ್ರಜಾಸ್ತ್ರ ಸುದ್ದಿ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಹಿರಿಯ ನಟ, ರಾಜಕಾರಣಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಾಯಾಂ ಪಕ್ಷ ಸ್ಪರ್ಧೆ ಮಾಡುತ್ತಿದೆ. ತೃತೀಯ ರಂಗದೊಂದಿಗೆ ಸೀಟು ಹಂಚಿಕೆ ಮಾಡಿಕೊಂಡು ಚುನಾವಣೆಗೆ ಎಂಟ್ರಿ ಕೊಡುತ್ತಿದ್ದಾರೆ.

ಮಕ್ಕಳ್ ನೀಧಿ ಮಾಯಾಂ ಪಕ್ಷ 154 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದೆ. ಶರತಕುಮಾರ ಅವರ ಎಐಎಸ್ಎಂಕೆ ಹಾಗೂ ರವಿ ಪಚಮುತ್ತು ಅವರ ಐಜೆಕೆ ಪಕ್ಷವು ತಲಾ 40 ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿವೆ. ಹೀಗೆ ತೃತೀಯ ರಂಗದೊಂದಿಗೆ ಸೀಟು ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ಎಂಎನ್ಎಂ ಪ್ರಧಾನ ಕಾರ್ಯದರ್ಶಿ ಸಿ.ಕೆ ಕುಮಾರವೇಲ್ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!