ಕಮಲ್ ಹಾಸನ್ ವಿರುದ್ಧ ದೂರು

514

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ವಿರುದ್ಧ ದೂರು ನೀಡಲಾಗಿದೆ. ಕಾರಣ ಅವರ ಅಪ್ ಕಮಿಂಗ್ ಮೂವಿ ವಿಕ್ರಮ್ ಚಿತ್ರದಲ್ಲಿನ ಹಾಡು. ಇತ್ತೀಚೆಗೆ ಬಿಡುಗಡೆಯಾಗಿರುವ ಪಾತಳ ಪಾತಳ ಅನ್ನೋ ಹಾಡು ಸಖತ್ ಸೌಂಡ್ ಮಾಡುತ್ತಿದೆ. ಇದರ ನಡುವೆ ಚೆನ್ನೈ ಮೂಲದ ಸೆಲ್ವಂ ಅನ್ನೋ ವ್ಯಕ್ತಿ ದೂರು ದಾಖಲಿಸಿದ್ದಾನೆ.

ನಟ ಕಮಲ್ ಹಾಸನ್ ಸ್ವತಃ ಸಾಹಿತ್ಯ ಬರೆದಿದ್ದಾರೆ. ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿನಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ಸಾಲುಗಳಿವೆ. ಈ ಕಾರಣಕ್ಕೆ ದೂರು ದಾಖಲಿಸಲಾಗಿದೆ. ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ. ಮದ್ರಾಸ್ ಹೈಕೋರ್ಟಿಗೆ ಹೋಗುವುದಾಗಿ ಹೇಳಿದ್ದಾನೆ.

ಲೋಕೇಶ್ ಕನಗರಾಜ್ ನಿರ್ದೇಶನದ ಚಿತ್ರದಲ್ಲಿ ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಅನ್ನೋ ದೈತ್ಯ ಪ್ರತಿಭೆಗಳಿವೆ. ಹೀಗಾಗಿ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!