ಪುಷ್ಪಾ ಸಿನ್ಮಾ ಶೈಲಿಯಲ್ಲಿ ತೇಗದ ಮರ ಸಾಗಾಟ ಪತ್ತೆ

284

ಪ್ರಜಾಸ್ತ್ರ ಸುದ್ದಿ

ಕೊಲ್ಕತ್ತಾ: ಪುಷ್ಪಾ ಸಿನಿಮಾ ಬಹುತೇಕರಿಗೆ ಗೊತ್ತು. ಈ ಚಿತ್ರದ ನಾಯಕ ರಕ್ತಚಂದನ ಮಾಫಿಯಾ ನಡೆಸುತ್ತಾನೆ. ಅರಣ್ಯ ಅಧಿಕಾರಿಗಳಿಂದ, ಪೊಲೀಸರಿಂದ ಹೇಗೆ ತಪ್ಪಿಸಿಕೊಂಡು ಅಪರಾಧಿ ಕೃತ್ಯವೆಸಗುತ್ತಾನೆ ಅನ್ನೋದು ಕಥೆ. ಅದೇ ರೀತಿ ರಿಯಲ್ ಲೈಫ್ ನಲ್ಲಿ ತೇಗದ ಮರ ಸಾಗಿಸಲು ಹೋಗಿ ಇಲ್ಲೊಬ್ಬ ಸಿಕ್ಕಿಬಿದ್ದಿದ್ದಾನೆ.

ಸ್ಲೀಪರ್ ಕೋಚ್ ವೋಲೋ ಬಸ್ ನಲ್ಲಿ ತೇಗದ ಮರಗಳನ್ನು ಸಾಗಿಸುತ್ತಿದ್ದಾಗ ಪಶ್ಚಿಮ ಬಂಗಾಳದ ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಬಗ್ಗೆ ಎಎಫ್ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಟ್ವೀಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ಪುಷ್ಪಾ ಸಿನಿಮಾ ಜೊತೆಗೆ ಇದನ್ನು ಹೋಲಿಸಿ ನಮ್ಮ ತಂಡವನ್ನು ಅವಮಾನಿಸಬೇಡಿ ಎಂದ್ದಿದ್ದಾರೆ.




Leave a Reply

Your email address will not be published. Required fields are marked *

error: Content is protected !!