ಹೊಸ ಜರ್ಸಿ ಬಿಡುಗಡೆ ಮಾಡಿದ ಜಡೇಜಾ

144

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಇಂದಿನಿಂದ ಸೆಪ್ಟೆಂಬರ್ 11ರ ತನಕ ಏಷ್ಯಾ ಕಪ್ 2022 ಟೂರ್ನಿ ನಡೆಯಲಿದೆ. ಭಾನುವಾರ ಭಾರತ ಹಾಗೂ ಪಾಕ್ ಮೊದಲ ಪಂದ್ಯ ನಡೆಯಲಿದೆ. ಹೀಗಾಗಿ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಹೊಸ ಜರ್ಸಿ ಬಿಡುಗಡೆ ಮಾಡಿದ್ದಾರೆ.

ಏಷ್ಯಾ ಕಪ್ ಗಾಗಿ ಮೊದಲ ಕ್ರಿಕೆಟ್ ಕಿಟ್ ಪಡೆದ ಆಟಗಾರನಾಗಿದ್ದರೆ, ಇತ್ತು ಟೀಂ ಇಂಡಿಯಾ ಹೊಸ ಜರ್ಸಿಯನ್ನು ಸಹ ರಿಲೀಸ್ ಮಾಡಿದ್ದಾರೆ. ಈಗಾಗ್ಲೇ ದುಬೈ ತಲುಪಿರುವ ತಂಡ ಅಭ್ಯಾಸ ನಡೆಸಿದೆ. 2ನೇ ಪಂದ್ಯ ಆಗಸ್ಟ್ 31ರಂದು ಹಾಂಕಾಂಗ್ ಎದುರು ಆಡಲಿದೆ.

ಕೋವಿಡ್ ಕಾರಣಕ್ಕೆ ಭಾರತದ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಯುಎಇಗೆ ತೆರಳು ಆಗಿಲ್ಲ. ಹೀಗಾಗಿ ದ್ರಾವಿಡ್ ಜಾಗಕ್ಕೆ ವಿವಿಎಸ್ ಲಕ್ಷ್ಮಣ್ ಗೆ ಮುಖ್ಯ ಸ್ಥಾನ ನೀಡಲಾಗಿದೆ. ಇತ್ತೀಚೆಗೆ ಜಿಂಬಾಬ್ವೆ ವಿರುದ್ಧದ 3 ಏಕದಿನ ಪಂದ್ಯಗಳಿಗೂ ಲಕ್ಷ್ಮಣ್ ಮುಖ್ಯ ಕೋಚ್ ಆಗಿದ್ದರು.




Leave a Reply

Your email address will not be published. Required fields are marked *

error: Content is protected !!