ವಿಜಯಪುರ ಜಿಲ್ಲೆಯಾದ್ಯಂತ ವ್ಯಾಪಕ ಮಳೆ

195

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕಳೆದ ಹಲವು ದಿನಗಳಿಂದ ನಿಂತು ಹೋಗಿದ್ದ ಮಳೆ, ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗಿನ ಜಾವದ ತನಕ ಹಲವು ಕಡೆ ಭಾರೀ ಮಳೆಯಾಗಿದೆ. ಜಿಲ್ಲೆಯ ಹಲವು ತಾಲೂಕುಗಳಲ್ಲಿ ರಾತ್ರಿಪೂರ್ತಿ ಮಳೆ ಸುರಿದಿದೆ.

ವಿಜಯಪುರ, ದೇವರ ಹಿಪ್ಪರಗಿ, ಸಿಂದಗಿ, ಆಲಮೇಲ, ಇಂಡಿ ಸೇರಿದಂತೆ ಹಲವು ತಾಲೂಕುಗಳಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ರಾತ್ರಿಪೂರ್ತಿ ಬಿಟ್ಟು ಬಿಡದೆ ಮಳೆ ಸುರಿದಿದೆ. ಹೀಗಾಗಿ ಹಲವು ಕಡೆ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಮಳೆ ನಿಂತು ಹೋಯಿತು ಎಂದುಕೊಂಡಿದ್ದ ಜನರಿಗೆ, ಕಳೆದ ರಾತ್ರಿ ಆದ ಭಾರೀ ಮಳೆಗೆ ಕಂಗಾಲಾಗಿದ್ದಾರೆ.

ಮಳೆಯಿಂದಾಗಿ ಜಿಲ್ಲೆಯ ಹಲವು ಕಡೆ ವಿದ್ಯುತ್ ಸಮಸ್ಯೆ ಕಾಣಿಸಿಕೊಂಡಿದೆ. ಐದಾರು ಗಂಟೆಗಳ ಕಾಲ ವಿದ್ಯುತ್ ಕಡಿತದಿಂದಾಗಿ ಸಾರ್ವಜನಿಕರು ಮತ್ತೊಂದು ರೀತಿಯಲ್ಲಿ ಪರದಾಡುವಂತಾಗಿದೆ. ಇಂದು ಸಹ ಮತ್ತೆ ಮಳೆಯಾಗುವ ಲಕ್ಷಣಗಳಿವೆ.




Leave a Reply

Your email address will not be published. Required fields are marked *

error: Content is protected !!