ದೇವಸ್ಥಾನಗಳೇ ಟಾರ್ಗೆಟ್ ಯಾಕೆ?: ಸಂಸದ ಪ್ರತಾಪ್ ಸಿಂಹ

233

ಪ್ರಜಾಸ್ತ್ರ ಸುದ್ದಿ

ಮೈಸೂರು: ಜಿಲ್ಲಾಡಳಿತ ಹಿಂದೂ ದೇವಸ್ಥಾನಗಳನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿರುವ ಶೇಕಡ 90ರಷ್ಟು ದೇವಾಲಯಗಳನ್ನು ನೆಲಸಮ ಮಾಡಲು ಜಿಲ್ಲಾಡಳಿ ಮುಂದಾಗಿದೆ. ಇದಕ್ಕೆ ಕಾರಣ ಏನು ಎಂದು ಕಿಡಿ ಕಾರಿದರು.

ಬರೀ ದೇವಸ್ಥಾನಗಳು ಯಾಕೆ? ಮಸೀದಿ, ಚರ್ಜ್ ಕಾಣಿಸುತ್ತಿಲ್ಲವೇ? ಜಿಲ್ಲಾಡಳಿತ ಎಲ್ಲದಕ್ಕೂ ಸುಪ್ರೀಂ ಕೋರ್ಟ್ ಆದೇಶ ಎನ್ನುತ್ತದೆ. 2009ರಲ್ಲಿ ದೇವಸ್ಥಾನ, ಮಸೀದಿ, ಚರ್ಚ್ ತಲೆ ಎತ್ತಲು ಬಿಡಬೇಡಿ ಎಂದಿದೆ. ಆದರೆ, ಕ್ಯಾತಮಾರನಹಳ್ಳಿಯಲ್ಲಿ ಅನಧಿಕೃತ ಮಸೀದಿಗೆ ಅನುಮತಿ ನೀಡಿಲ್ಲವಾ? ಎನ್.ಆರ್ ಕ್ಷೇತ್ರದಲ್ಲಿ ಎಷ್ಟು ಮಸೀದಿ, ಚರ್ಚ್ ಅನಧಿಕೃತವಾಗಿವೆ? ಇದು ಕೋರ್ಟ್ ಆದೇಶ ಉಲ್ಲಂಘನೆ ಅಲ್ಲವಾ ಎಂದು ವಾಗ್ದಾಳಿ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!