ಪ್ರಜಾಸ್ತ್ರ ಸುದ್ದಿ
ಧಾರವಾಡ: ನಡುರಸ್ತೆಯಲ್ಲಿ ಮಹಿಳೆಯ ಕೈ ಹಿಡಿದು ಜೆಡಿಎಸ್ ಮುಖಂಡನೊಬ್ಬ ಎಳೆದಾಡಿರುವ ಘಟನೆಯೊಂದು ನಗರದ ಸುತ್ತೂರ ಬಡಾವಣೆಯಲ್ಲಿ ನಡೆದಿದೆ. ಜೆಡಿಎಸ್ ಮುಖಂಡ ಶ್ರೀಕಾಂತ ಜುಮನಾಳ, ಮಹಿಳೆ ಕೈ ಹಿಡಿದು ಎಳೆದಾಡಿದ್ದಾನೆ ಎನ್ನಲಾಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸುತ್ತೂರು ನಿವಾಸಿಯಾಗಿರುವ ಮಹಿಳೆ, ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಈ ರೀತಿಯಾಗಿ ಜೆಡಿಎಸ್ ಮುಖಂಡ ನಡೆದುಕೊಂಡಿದ್ದಾನೆ ಎನ್ನಲಾಗುತ್ತಿದೆ. ಯಾವ ಕಾರಣಕ್ಕೆ ಈ ರೀತಿಯಾಗಿ ನಡೆದುಕೊಂಡಿದ್ದಾರೆ ಅನ್ನೋದು ತಿಳಿದು ಬಂದಿಲ್ಲ. ವಿದ್ಯಾಗಿರಿ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದು, ಆರೋಪಿಯ ಹುಡುಕಾಟ ನಡೆಸಲಾಗುತ್ತಿದೆ.