ದೆಹಲಿಯಲ್ಲಿ ಇಬ್ಬರು ಜೈಶ್ ಇ ಅಹಮ್ಮದ್ ಉಗ್ರರು ಅರೆಸ್ಟ್

253

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಮಂಗಳವಾರ ಬೆಳಗ್ಗೆ ದೆಹಲಿ ಪೊಲೀಸರ ವಿಶೇಷ ಘಟಕ, ಜೈಶ್ ಇ ಅಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನ ಬಂಧಿಸಿದ್ದಾರೆ. ಬಂಧಿತ ಉಗ್ರರ ವಿಚಾರಣೆಯನ್ನ ಪೊಲೀಸರು ನಡೆಸ್ತಿದ್ದಾರೆ.

ನಗರದ ಸರಾಯ್ ಕಾಳೆ ಖಾನ್ ಪ್ರದೇಶದಿಂದ ಭಯೋತ್ಪಾದಕರನ್ನ ಬಂಧಿಸಲಾಗಿದೆ ಎಂದು ಹೇಳಲಾಗ್ತಿದೆ. ಅಬ್ದುಲ್ ಲತೀಫ್ ಮೀರ್ ಹಾಗೂ ಮೊಹಮ್ಮದ ಅಶ್ರಫ್ ಬಂಧಿತ ಉಗ್ರರು ಎಂದು ಗುರುತಿಸಲಾಗಿದೆ. ಬಂಧಿತರಿಂದ 2 ಅರೆ ಸ್ವಯಂಚಾಲಿತ ಪಿಸ್ತೂಲ್, 10 ಜೀವಂತ ಕಾಟ್ರಿಡ್ಜ್ ವಶಪಡಿಸಿಕೊಳ್ಳಲಾಗಿದೆ.




Leave a Reply

Your email address will not be published. Required fields are marked *

error: Content is protected !!