ಪ್ರಜಾಸ್ತ್ರ ಸುದ್ದಿ
ಜಮ್ಮು-ಕಾಶ್ಮೀರ: ಕಣಿವೆ ನಾಡಿನ ಕುಲ್ಗಾಮ್ ಹಾಗೂ ಅನಂತ್ ನಾಗ್ ಜಿಲ್ಲೆಯಲ್ಲಿ ಎನ್ ಕೌಂಟರ್ ನಡೆಸಲಾಗಿದ್ದು, ಇದರಲ್ಲಿ ನಾಲ್ವರು ಉಗ್ರರು ಹತ್ಯೆಯಾಗಿದೆ. ಇಂದು ನಸುಕಿನ ಜಾವ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರನ್ನ ಉಡೀಸ್ ಮಾಡಲಾಗಿದೆ.
ಕಳೆದ ಕೆಲ ದಿನಗಳಿಂದ ಮತ್ತೆ ಉಗ್ರರ ಉಪಟಳ ಹೆಚ್ಚಾಗಿದೆ. ಹೀಗಾಗಿ ಭಾರತೀಯ ಸೇನೆ ನಿರಂತರವನ್ನ ಅವರನ್ನ ಮಟ್ಟ ಹಾಕುವ ಕೆಲಸ ಮಾಡ್ತಿದೆ. ಇಂದು ಮತ್ತೆ ಕುಲ್ಗಾಮ್ ಮತ್ತು ಅನಂತ್ ನಾಗ್ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ನಡೆದ ಎನ್ ಕೌಂಟರ್ ನಲ್ಲಿ ನಾಲ್ವರು ಹತ್ಯೆಯಾಗಿದೆ.