ಚಡಚಣದಲ್ಲಿ ಸರಣಿ ಕಳ್ಳತನ

338

ಪ್ರಜಾಸ್ತ್ರ ಅಪರಾಧ ಸುದ್ದಿ

ಚಡಚಣ: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ರೇವತಗಾಂವ ಗ್ರಾಮದಲ್ಲಿ ಅಂಗಡಿ ಹಾಗೂ ಮನೆಗಳ ಸರಣಿ ಕಳ್ಳತನವಾಗಿದೆ. ಕುಟುಂಬಸ್ಥರು ಮನೆಯ ಮಹಡಿಯ ಮೇಲೆ ಮಲಗಿದಾಗ ಎರಡು ದಿನಸಿ ಅಂಗಡಿ ಹಾಗೂ ನಾಲ್ಕು ಮನೆಗಳಲ್ಲಿ ಕಳ್ಳತನ ಮಾಡಲಾಗಿದೆ.

ಕಳ್ಳರು ಒಂದು ಬೈಕ್, ನಗದು, ಚಿನ್ನಾಭರಣ, ಬೆಲೆಬಾಳುವ ಬಟ್ಟೆಗಳನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಸುಭಾಷ ದಾಭೆ, ಸೂರಪ್ಪ ದಾಭೆ, ಅನ್ನಪೂರ್ಣ ಖಾತೆ, ಸಿದ್ದಪ್ಪ ಜಾಬಗೊಂಡೆ, ಸಿದ್ದರಾಯ ಬಿರಾದಾರ ಅವರಿಗೆ ಸೇರಿದ ಮನೆ ಹಾಗೂ ಅಂಗಡಿಗಳ ಕಳ್ಳತನವಾಗಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳನ್ನ ಕದಿಯಲಾಗಿದೆ. ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!