ಮಾಹಾ ಚಾಲಾಕಿ ಕಳ್ಳಿಯ ಬಂಧನ

264

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಹಾಡಹಗಲೇ ಮನೆಯ ಬೀಗಿ ಒಡೆದು ಕಳ್ಳತನ ಮಾಡ್ತಿದ್ದ ಮಾಹಾ ಚಾಲಾಕಿ ಕಳ್ಳಿಯನ್ನ ಬಂಧಿಸಲಾಗಿದೆ. ಆನೆಪಾಳ್ಯ ನಿವಾಸಿ 24 ವರ್ಷದ ನಗ್ಮಾ ಬಂಧಿತ ಆರೋಪಿಯಾಗಿದ್ದಾಳೆ. ಈಕೆಯನ್ನ ಬಂಧಿಸಿರುವ ಚಂದ್ರಾಲೇಔಟ್ ಠಾಣೆ ಪೊಲೀಸರು 6.46 ಲಕ್ಷ ಮೌಲ್ಯದ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ.

ಈಕೆಯ ಬಂಧನದಿಂದ ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯ 2 ಮನೆ ಕಳ್ಳತನ, 3 ಚಿನ್ನದಾಭರಣ ಕಳ್ಳತನ ಪ್ರಕರಣ ಬಯಲಾಗಿದೆ. ಕಳೆದ ಡಿಸೆಂಬರ್ 13ರಂದು ಅತ್ತಿಗುಪ್ಪೆ ಹತ್ತಿರ ಮಧ್ಯಾಹ್ನದ ಸಮಯದಲ್ಲಿ ಮನೆ ಕಳ್ಳತನ ಮಾಡಲಾಗಿತ್ತು. ಇದರ ತನಿಖೆ ನಡೆಸಿದ್ದ ಪೊಲೀಸರು ಫೆಬ್ರವರಿ 18ರಂದು ನಯಾಜ್ ಖಾನ್, ಅಪ್ಸರ್ ಅಹ್ಮದ್ ಎಂಬುವರನ್ನ ಬಂಧಿಸಿದ್ರು.

ಇನ್ನು ನಗ್ಮಾ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ ಇವಳನ್ನ ಬಂಧಿಸಲಾಗಿದೆ. ಇವಳನ್ನ ಈ ಹಿಂದೆ ಬನಶಂಕರಿ ಹಾಗೂ ಎಚ್ಎಎಲ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಬಂಧಿತಳಾಗಿದ್ಳು.




Leave a Reply

Your email address will not be published. Required fields are marked *

error: Content is protected !!