ಆಸೀಸ್ ಬ್ಯಾಟಿಂಗ್ ಬೌಲಿಂಗ್ ಮುಂದೆ ಶರಣಾದ ಟೀಂ ಇಂಡಿಯಾ

227

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸೀಸ್ ಭರ್ಜರಿ ಗೆಲುವು ದಾಖಲಿಸಿದೆ. ಆ್ಯರೆನ್ ಪಿಂಚ್ ಬಳಗ 66 ರನ್ ಗಳ ಗೆಲುವು ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಬ್ಯಾಟಿಂಗ್ ಹಾಗೂ ಭರ್ಜರಿ ಬೌಲಿಂಗ್ ನಿಂದಾಗಿ ಭಾರತದ ಮೇಲೆ ಸವಾರಿ ಮಾಡಿತು.

ಆಸೀಸ್ ನೀಡಿದ್ದ 374 ರನ್ ಗಳ ಬಿಗ್ ಟಾರ್ಗೆಟ್ ಬೆನ್ನಹತ್ತಿದ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 308 ರನ್ ಗಳಿಗೆ ಸೋಲು ಅನುಭವಿಸಿದೆ. ಇಂಡಿಯಾ ಪರ ಹಾರ್ದಿಕ್ ಪಾಂಡೆ ಭರ್ಜರಿ 90, ಶಿಖರ ಧವನ್ 74 ರನ್ ಬಾರಿಸಿದ್ದಾರೆ. ಮಯಾಂಕ್ ಅಗರ್ವಾಲ್ 22, ಕ್ಯಾಪ್ಟನ್ ಕೊಹ್ಲಿ 21, ಶ್ರೇಯಸ ಅಯ್ಯರ 2, ಕೆ.ಎಲ್ ರಾಹುಲ 12, ಜಡೇಜಾ 25, ನವದೀಪ ಸೈನಿ 29, ಮೊಹಮ್ಮದ ಶೆಮಿ 13 ರನ್ ಬಾರಿಸಿದ್ದಾರೆ. ಆಸ್ಟ್ರೇಲಿಯಾ ಪರ ಜಂಪಾ 4, ಹಝಲ್ ವುಡ್ 3, ಸ್ಟ್ರಾಕ್ 1 ವಿಕೆಟ್ ಪಡೆದ್ರು.

ಇನ್ನು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸೀಸ್ ಟೀಂ, ಕ್ಯಾಪ್ಟೆನ್ ಆ್ಯರೆನ್ ಪಿಂಚ್ 114, ಸ್ಟೀವ್ ಸ್ಮಿತ್ 105, ಡೇವಿಡ್ ವಾರ್ನರ್ 69, ಮ್ಯಾಕ್ಸ್ ವೆಲ್ 45 ರನ್ ಗಳಿಸಿದ್ರು. ಇದ್ರಿಂದಾಗಿ ಕಾಂಗೂರ್ ಪಡೆ 6 ವಿಕೆಟ್ ಕಳೆದುಕೊಂಡು ಭರ್ಜರಿ 374 ರನ್ ಕಲೆ ಹಾಕಿತು. ಇಂಡಿಯಾ ಪರ ಶೆಮಿ 3, ಬೂಮ್ರಾ, ಸೈನಿ, ಚಾಹಲ್ ತಲಾ 1 ವಿಕೆಟ್ ಪಡೆದ್ರು.




Leave a Reply

Your email address will not be published. Required fields are marked *

error: Content is protected !!