ಮೈಸೂರು ಖದೀಮರು ಹಾಸನದಲ್ಲಿ ಸಿಕ್ಕರು…

364

ಹಾಸನ: ಮನೆಯಲ್ಲಿ ಯಾರೂ ಇಲ್ಲದ ಟೈಂ ನೋಡಿಕೊಂಡು ಕಳ್ಳತನ ಮಾಡ್ತಿದ್ದ ಮೈಸೂರು ಮೂಲದ ಖದೀಮರನ್ನ ಹಾಸನದಲ್ಲಿ ಬಂಧಿಸಲಾಗಿದೆ. ಮೈಸೂರಿನ ಸೈಯದ ನಾಸೀರ, ಕೇಶವ ಬಾಬು ಗಾಯಕ್ವಾಡ ಹಾಗೂ ಸರಗೂರು ಗ್ರಾಮದ ಫಯಾಜ ಅಹ್ಮದ ಬಂಧಿತ ಕಳ್ಳರು.

ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಸೇರಿದಂತೆ ಅನೇಕ ಕಡೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಾರ್ಚ್ 2 ರಂದು ಸಕಲೇಶಪುರ ನಗರದ ಬಸ್ ನಿಲ್ದಾಣದ ಬಳಿ ಅನುಮಾನಸ್ಪದ ರೀತಿಯಲ್ಲಿ ನಿಂತಿದ್ದ ಫಯಾಜ ಅಹ್ಮದನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ಬಳಿಕ ಉಳಿದಿಬ್ಬರನ್ನ ಬಂಧಿಸಲಾಗಿದೆ.

ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದ ಹರಿಪ್ರಸಾದ ಎಂಬುವರು, ಸಂಬಂಧಿಕರೊಬ್ಬರ ಮದ್ವೆಗೆ ಹೋದಾಗ ಅವರ ಮನೆ ಕಳ್ಳತನವಾಗಿತ್ತು. ಮನೆಯ ಮೇಲ್ಛಾವಣಿಯ ಮೂಲಕ ಒಳನುಗಿದ್ದ ಖದೀಮರು, ಬೀರುವಿನಲ್ಲಿದ್ದ 35 ಸಾವಿರ ರೂಪಾಯಿ ಹಾಗೂ 40 ಗ್ರಾಂ ಚಿನ್ನಾಭರಣ ಕದ್ದಿದ್ರು. ಹರಿಪ್ರಸಾದ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಿಸಿದ್ರು. ಕಳೆದ ಮೂರು ತಿಂಗಳಿನಿಂದ ಪಟ್ಟಣದಲ್ಲಿ ಹೆಚ್ಚುತ್ತಿರುವ ಕಳ್ಳತನದ ಬಗ್ಗೆ ಗಂಭೀರವಾಗಿ ತೆಗೆದುಕೊಂಡು, ಕಾರ್ಯಾಚರಣೆ ನಡೆಸಿದಾಗ ಈ ಮೂವರು ಚೋರರು ಅರೆಸ್ಟ್ ಆಗಿದ್ದು, 22 ಪ್ರಕರಣಗಳಲ್ಲಿ ಭಾಗಿಯಾಗಿದ್ರು ಅನ್ನೋದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!