ರಾಜ್ಯದಲ್ಲಿ ಇಂದು 5041 ಜನರಲ್ಲಿ ಸೋಂಕು

223

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಇಂದು ಅತ್ಯಂತ ಕಡಿಮೆ ಜನರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. 24 ಗಂಟೆಯಲ್ಲಿ 5041 ಜನರಲ್ಲಿ ಸೋಂಕು ದೃಢಪಟ್ಟಿದೆ. 50 ಸಾವಿರ ದಾಟಿದ ಸೋಂಕು 5 ಸಾವಿರಕ್ಕೆ ಇಳಿದಿರುವುದು ನಿಜಕ್ಕೂ ಸಂತೋಷ ವಿಷಯ. ಇದು ದಿನದಿಂದ ದಿನಕ್ಕೆ ಇನ್ನಷ್ಟು ಇಳಿಕೆ ಕಾಣುವ ಮೂಲಕ ಕರೋನಾ ಮುಕ್ತ ಕರ್ನಾಟಕ ಆಗಬೇಕಿದೆ.

ಇಂದಿನ ಸೋಂಕಿತರ ಸಂಖ್ಯೆಯೊಂದಿಗೆ 2777010 ಜನರಲ್ಲಿ ಇದುವರೆಗೂ ಕರೋನಾ ದೃಢಪಟ್ಟಿದೆ. ಇಂದು 14785 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಇಲ್ಲಿಯ ತನಕ 2581559 ಜನರು ಚೇತರಿಸಿಕೊಂಡಿದ್ದಾರೆ. 162282 ಪ್ರಕರಣಗಳು ಸಕ್ರಿಯವಾಗಿವೆ.

ಇಂದು 115 ಜನರು ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 33148ಕ್ಕೆ ಏರಿಕೆಯಾಗಿದೆ. ಜಿಲ್ಲಾವಾರು ಅಂಕಿಅಂಶ ಹೀಗಿದೆ..




Leave a Reply

Your email address will not be published. Required fields are marked *

error: Content is protected !!