ರಾಜ್ಯದಲ್ಲಿ 3 ಲಕ್ಷ ದಾಟಿದ ಕೋವಿಡ್ ಸೋಂಕಿತರು

277

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 8,580 ಜನರಲ್ಲಿ ಕರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ 300406 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದೆ.

ಇಂದು 7,249 ಜನರು ಡಿಸ್ಚಾರ್ಜ್ ಆಗಿದ್ದು, 2,11,688 ಜನರು ಇದುವರೆಗೂ ಗುಣಮುಖರಾಗಿದ್ದಾರೆ. 83,608 ಪ್ರಕರಣಗಳು ಸಕ್ರಿಯವಾಗಿವೆ. ಇಂದು 133 ಜನರು ಸಾವನ್ನಪ್ಪುವುದರೊಂದಿಗೆ 5091ಕ್ಕೆ ಏರಿಕೆಯಾಗಿದೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ..

ಬಾಗಲಕೋಟೆ 154, ಬಳ್ಳಾರಿ 510, ಬೆಳಗಾವಿ 289, ಬೆಂ.ಗ್ರಾ 136, ಬೀದರ 42, ಚಾಮರಾಜನಗರ 51, ಚಿಕ್ಕಬಳ್ಳಾಪುರ 87, ಚಿಕ್ಕಮಗಳೂರು 97, ಚಿತ್ರದುರ್ಗ 78, ದ.ಕ 314, ದಾವಣಗೆರೆ 233, ಧಾರವಾಡ 255, ಗದಗ 124, ಹಾಸನ 154, ಹಾವೇರಿ 164, ಕಲಬುರಗಿ 180, ಕೊಡಗು 26, ಕೋಲಾರ 88, ಕೊಪ್ಪಳ 158, ಮಂಡ್ಯ 155, ಮೈಸೂರು 951, ರಾಯಚೂರು 136, ರಾಮನಗರ 47, ಶಿವಮೊಗ್ಗ 166, ತುಮಕೂರು 88, ಉಡುಪಿ 251, ಉ.ಕ 129, ವಿಜಯಪುರ 131, ಯಾದಗಿರಿ 102 ಸೇರಿದಂತೆ  8,580 ಜನರಲ್ಲಿ ಸೋಂಕು ಪತ್ತೆಯಾಗಿದೆ.




Leave a Reply

Your email address will not be published. Required fields are marked *

error: Content is protected !!