ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ಸಾಮಾನ್ಯ ಪರೀಕ್ಷೆ-2020 ಫಲಿತಾಂಶ ಇಂದು ಪ್ರಕಟವಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ 12.30ಕ್ಕೆ ಫಲಿತಾಂಶವನ್ನ kea.kar.nic.in ನಲ್ಲಿ ಪ್ರಕಟಿಸಲಿದೆ. ಸಿಇಟಿ ಫಲಿತಾಂಶ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ.ಸಿ ಅಶ್ವತ್ಥನಾರಾಯಣ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಬೆಳಗ್ಗೆ 11ಕ್ಕೆ ಸಚಿವರು ಪ್ರೆಸ್ ಮೀಟ್ ನಡೆಸಲಿದ್ದಾರೆ. ಜುಲೈ 30 ಹಾಗೂ 31ರಂದು ಸಿಇಟಿ ಪರೀಕ್ಷೆ ನಡೆಸಲಾಗಿತ್ತು. 1,84,368 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ರು. ಇದರಲ್ಲಿ 1,800 ವಿದ್ಯಾರ್ಥಿಗಳು ಅನ್ಯರಾಜ್ಯದವರಾಗಿದ್ದಾರೆ.