ಪಾಕ್ ಮತ್ತು ನ್ಯೂಜಿಲೆಂಡ್ ಗೆ ಹೈಟೆನ್ಷನ್ ಮ್ಯಾಚ್

391

ಲಂಡನ್: ಇಂದು ಪಾಕಿಸ್ತಾನ ಹಾಗೂ ಅಫಘಾನಿಸ್ತಾನ್ ನಡುವೆ ಹಾಗೂ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯಲಿದೆ. ಪಾಕ್ ಗೆ ಉಳಿದಿರುವ ಎರಡು ಪಂದ್ಯಗಳಲ್ಲಿ ಮಾಡು ಇಲ್ಲವೆ ಮಡಿ ಅನ್ನೋ ಸ್ಥಿತಿಯಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದು ಸೆಮಿಫೈನಲ್ ಆಸೆಯನ್ನ ಜೀವಂತವಾಗಿಟ್ಟುಕೊಳ್ಳವ ತವಕ. ಇನ್ನು ಆಡಿರುವ 7 ಪಂದ್ಯಗಳಲ್ಲಿ ಸೋಲು ಕಂಡಿರುವ ದುರ್ಬಲ ಅಫಘಾನಿಸ್ತಾನ್ ಪಾಕ್ ವಿರುದ್ಧ ಹೇಗೆ ಆಡುತ್ತೆ ಅನ್ನೋ ಕುತೂಹಲವಿದೆ. ಯಾಕಂದ್ರೆ, ಕಳೆದ ಪಂದ್ಯದಲ್ಲಿ ಭಾರತದ ವಿರುದ್ಧ ಭರ್ಜರಿಯಾಗಿ ಆಡಿದ್ದ ಅಫಘಾನಿಸ್ತಾನದ ಆಟಗಾರರು, ಇಂಡಿಯಾದ ಗೆಲುವು ಕಸಿದುಕೊಳ್ಳುವ ಮಟ್ಟಕ್ಕೆ ಬಂದಿದ್ರು.

ಬಾಂಗ್ಲಾ ಜೊತೆ ಆಡುವ ಇನ್ನೊಂದು ಪಂದ್ಯ ಪಾಕಿಸ್ತಾನದ ಪಾಲಿಗಿದೆ. ಅತ್ತ ಬಾಂಗ್ಲಾಗೂ ಇದೇ ಸ್ಥಿತಿಯಿದ್ದು, ಭಾರತದ ಜೊತೆ ಸೆಣಸಾಟ ನಡೆಸಲಿದೆ. ಇದು ಸಹ 7 ಪಾಯಿಂಟ್ ಹೊಂದಿದ್ದು, ಉಳಿದಿರುವ ಎರಡೂ ಪಂದ್ಯಗಳನ್ನ ಗೆಲ್ಲುವ ಒತ್ತಡದಲ್ಲಿದೆ. ಹೀಗಾಗಿ ಪಾಕ್ ಗೆ ಇಂದಿನ ಪಂದ್ಯ ಸಹ ಅತ್ಯಂತ ಮುಖ್ಯವಾಗಿದೆ.

ಇನ್ನು ಸಂಜೆ 6ಕ್ಕೆ ಲಾರ್ಡ್ಸ್ ಮೈದಾನದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಪಂದ್ಯ ನಡೆಯಲಿದೆ. ಈಗಾಗ್ಲೇ ಸೆಮಿಫೈನಲ್ ತಲುಪಿರುವ ಆಸೀಸ್ ಹಾಗೂ ಸೆಮಿ ತಲುಪಲು ಇನ್ನೊಂದೆ ಮೆಟ್ಟಿಲು ದಾಟಬೇಕಿರುವ ಕೀವಿಸ್ ನಡುವೆ ಫೈಟ್ ನಡೆಯಲಿದೆ.

7 ಪಂದ್ಯಗಳನ್ನ ಆಡಿರುವ ಆಸ್ಟ್ರೇಲಿಯಾ 6 ಪಂದ್ಯ ಗೆದ್ದು ಒಂದು ಸೋತು 12 ಪಾಯಿಂಟ್ ಗಳೊಂದಿಗೆ ಸೆಮಿಫೈನಲ್ ತಲುಪಿದೆ. ಇಷ್ಟೇ ಪಂದ್ಯಗಳನ್ನ ಆಡಿರುವ ನ್ಯೂಜಿಲೆಂಡ್ 5ರಲ್ಲಿ ಗೆದ್ದು ಒಂದರಲ್ಲಿ ಸೋತಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ 11 ಪಾಯಿಂಟ್ ಗಳಿಂದ ಮೂರನೇ ಸ್ಥಾನದಲ್ಲಿದೆ. ವಿಲಿಯಮ್ ಸನ್ ಪಡೆ ಇಂದಿನ ಪಂದ್ಯ ಗೆದ್ದು ಸೆಮಿಫೈನಲ್ ತಲುಪಿದ ಎರಡನೇ ತಂಡವಾಗುವ ಜೋಶ್ ನಲ್ಲಿದೆ.


TAG


Leave a Reply

Your email address will not be published. Required fields are marked *

error: Content is protected !!