ನಾಳೆ ಆಂಗ್ಲರ ವಿರುದ್ಧ ‘ಆರೆಂಜ್ ಬಾಯ್ಸ್’ ಕಾದಾಟ

452

ಲಂಡನ್: ನಾಳೆ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ ಎಡ್ಜ್ ಬಾಸ್ಟನ್ ಅಂಗಳದಲ್ಲಿ ಪಂದ್ಯ ನಡೆಯಲಿದೆ. ಸತತ ಗೆಲುವಿನ ನಾಗಾಲೋಟದಲ್ಲಿರುವ ಟೀಂ ಇಂಡಿಯಾ ಆಂಗ್ಲರನ್ನ ಮಣಿಸುವ ಮೂಲಕ ಸೆಮಿಫೈನಲ್ ಗೆ ಲಗ್ಗೆ ಇಡುವ ತವಕದಲ್ಲಿದೆ. ಭರ್ಜರಿ ಫಾರ್ಮ್ ನಲ್ಲಿರುವ ಭಾರತದ ಆಟಗಾರರು ಇಯಾನ್ ಮಾರ್ಗನ್ ಬಳಗವನ್ನ ಕಟ್ಟಿ ಹಾಕಲು ರೆಡಿಯಾಗಿದೆ.

ಆರಂಭಿಕ ಆಟಗಾರರಾದ ರೋಹಿತ ಶರ್ಮಾ, ಕನ್ನಡಿಗ ಕೆ.ಎಲ್ ರಾಹುಲ ಉತ್ತಮವಾದ ಓಪನಿಂಗ್ ನೀಡ್ತಿದ್ದಾರೆ. ಕ್ಯಾಪ್ಟನ್ ವಿರಾಟ ಕೊಹ್ಲಿ ಬ್ಯಾಟ್ ನಿಂದಲೂ ರನ್ ಮಳೆಯಾಗ್ತಿದೆ. ಮಿಡಲ್ ಆರ್ಡರ್ ನಲ್ಲಿ ಬರುವ ವಿಜಯ ಶಂಕರ ಹಾಗೂ ಜಾಧವ್ ಅವರಿಂದ ಹೇಳಿಕೊಳ್ಳುವ ಆಟ ಬಂದಿಲ್ಲ. ಆದ್ರೆ, ಹಿಟ್ಟರ್ ಪಾಂಡೆ, ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಎಂ.ಎಸ್ ಧೋನಿ ತಾಳ್ಮೆಯ ಆಟ ತಂಡಕ್ಕೆ ಆಸರೆಯಾಗ್ತಿದೆ. ಹೀಗಾಗಿ ಒಂದು ವೇಳೆ ಫಸ್ಟ್ ಬ್ಯಾಟಿಂಗ್ ತೆಗೆದುಕೊಂಡ್ರೆ 300 ಪ್ಲಸ್ ರನ್ ಮಾಡುವ ಟಾರ್ಗೆಟ್ ಇಟ್ಟುಕೊಳ್ಳಲಾಗಿದೆ.

ಇನ್ನು ಬೌಲಿಂಗ್ ವಿಭಾಗದಲ್ಲಿಯೂ ಭಾರತ ಶೈನ್ ಆಗ್ತಿದೆ. ಶೆಮಿ, ಬೂಮ್ರಾ, ಚಾಹಲ್, ಕುಲದೀಪ ಬೆಸ್ಟ್ ಬೌಲಿಂಗ್ ಮಾಡ್ತಿದ್ದಾರೆ. ಶೆಮಿ ಹಾಗೂ ಬೂಮ್ರಾ ಬೌಲಿಂಗ್ ವಿಭಾಗದ ಟ್ರಂಪ್ ಕಾರ್ಡ್ ಆಗಿದ್ದು, ಒಳ್ಳೆಯ ಟೈಂನಲ್ಲಿ ವಿಕೆಟ್ ಕಿತ್ತುತ್ತಿದ್ದಾರೆ. ಹೀಗಾಗಿ ನಾಳೆ ನಡೆಯುವ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳನ್ನ ಹೈರಾಣು ಮಾಡುವ ಸಾಧ್ಯತೆಯಿದೆ. ಆಡಿರುವ ಐದು ಪಂದ್ಯಗಳಲ್ಲಿ ಸತತ ಗೆಲುವು ದಾಖಲಿಸಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ 11 ಪಾಯಿಂಟ್ ಪಡೆದು ಎರಡನೇ ಸ್ಥಾನದಲ್ಲಿರುವ ಭಾರತ ಈ ಪಂದ್ಯ ಗೆದ್ದು ಮೊದಲ ಸ್ಥಾನಕ್ಕೆ ಜಿಗಿಯಲು ನೋಡ್ತಿದೆ.

ಇನ್ನು ಇಯಾನ್ ಮಾರ್ಗನ್ ಬಳಗದಲ್ಲಿಯೂ ಭರ್ಜರಿಯಾಗಿ ಆಡುವ ಆಟಗಾರರಿದ್ದಾರೆ. ಕ್ಯಾಪ್ಟನ್ ಮಾರ್ಗನ್, ವಿನ್ಸ್, ರಾಯ್, ರೂಟ್, ಸ್ಟ್ರೋಕ್, ಮೋಯಿನ್ ಅಲಿ ಬ್ಯಾಟಿಂಗ್ ಲೆನ್ ಪ್ ಚೆನ್ನಾಗಿದೆ. ಒಂದು ವೇಳೆ ಇವರಲ್ಲಿ ಒಂದೆರಡು ಒಳ್ಳೆಯ ಜೊತೆಯಾಟ ಬಂದ್ರೆ ಬಿಗ್ ಸ್ಕೋರ್ ಬರುವ ಸಾಧ್ಯತೆಯಿದೆ. ಇದರ ಜೊತೆಗೆ ಇನ್ನೊಂದು ಏನು ಅಂದ್ರೆ, ಇಂಗ್ಲೆಂಡ್ ಗೆ ಈ ಮ್ಯಾಚ್ ಗೆಲ್ಲಲೇಬೇಕು. ಯಾಕಂದ್ರೆ ಆಡಿರುವ 7 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 3ರಲ್ಲಿ ಸೋತಿದೆ. 8 ಪಾಯಿಂಟ್ ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಒಂದು ವೇಳೆ ಸೋತರೆ ಉಳಿದಿರುವ ಇನ್ನೊಂದು ಪಂದ್ಯ ಗೆದ್ದರೂ ಇಂಗ್ಲೆಂಡ್ ಸೆಮಿಫೈನಲ್ ಗೆ ಬರೋದು ಡೌಟ್. ಹೀಗಾಗಿ ಉಳಿದಿರುವ ಎರಡೂ ಪಂದ್ಯಗಳನ್ನ ಗೆಲ್ಲಬೇಕಾದ ಒತ್ತಡದಲ್ಲಿದೆ.

ಬೌಲಿಂಗ್ ವಿಭಾಗದಲ್ಲಿ ಆದಿಲ್ ರಶಿದ್, ಕ್ರಿಶ್, ಆರ್ಚರ್, ಲಿಮಾ ಹಾಗೂ ಮಾರ್ಕ್ ವುಡ್ ಎಷ್ಟರ ಮಟ್ಟಿಗೆ ಸಕ್ಸಸ್ ಆಗ್ತಾರೆ ಅನ್ನೋದು ನಾಳೆ ತಿಳಿಯಲಿದೆ.

ಬದಲಾದ ಇಂಡಿಯನ್ ಜೆರ್ಸಿ:

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಆರೆಂಜ್ ಕಲರ್ ಜೆರ್ಸಿ ತೊಟ್ಟುಕೊಳ್ತಿದ್ದಾರೆ. ಇದು ಕೇಸರಿ ಬಣ್ಣದಿಂದ ಕೂಡಿದ್ದು, ರಾಜಕೀಯ ಪಕ್ಷವೊಂದರ ಬಣ್ಣವೆಂದು ಕೆಲವರು ವಿವಾದ ಮಾಡಿದ್ರು. ಇದರ ಬಗ್ಗೆ ಚರ್ಚೆ ಸಹ ಆಯ್ತು. ನೈಕಿ ಕಂಪನಿ ವಿನ್ಯಾಸಗೊಳಿಸಿರುವ ಆರೆಂಜ್ ಜೆರ್ಸಿ ಶುಕ್ರವಾರ ಅನಾವರಣ ಮಾಡಲಾಗಿದೆ. ಜೆರ್ಸಿ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ. ಇಂದಿನ ಯುವಪಡೆ ಇದನ್ನ ಇಷ್ಟ ಪಡಲಿದ್ದಾರೆ. ಆಟಗಾರರಿಗೆ ಜೆರ್ಸಿ ಆರಾಮದಾಯಕವಾಗಿರುತ್ತೆ ಅಂತಾ ನೈಕಿ ಕಂಪನಿ ತಿಳಿಸಿದೆ.

ಈಗಾಗ್ಲೇ ಟೀಂ ಇಂಡಿಯಾದ ಆಟಗಾರರು ಆರೆಂಜ್ ಜೆರ್ಸಿ ತೊಟ್ಟು ಫೋಟೋ ಶೂಟ್ ಸಹ ಮಾಡಿದ್ದಾರೆ. ಹೊಸ ವಿನ್ಯಾಸದ ಡ್ರೆಸ್ ಇಂಡಿಯನ್ ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ಎನರ್ಜಿ ನೀಡಲಿದೆ ಎನ್ನಲಾಗ್ತಿದೆ. ಕಿತ್ತಳೆ ಬಣ್ಣದ ಜೊತೆಗೆ ನೀಲಿ ಬಣ್ಣವನ್ನ ಜೆರ್ಸಿಯಲ್ಲಿ ಉಳಿಸಿಕೊಳ್ಳಲಾಗಿದೆ. ಆತಿಥೇಯ ವಹಿಸಿರುವ ಇಂಗ್ಲೆಂಡ್ ಹೊರತು ಉಳಿದೆಲ್ಲ ತಂಡಗಳು ತಮ್ಮ ನಿಗಿದಿತ ಜೆರ್ಸಿ ಬದಲಾಗಿ ಒಂದು ಪಂದ್ಯದಲ್ಲಿಯಾದ್ರೂ ಬೇರೆ ಬಣ್ಣದ ಜೆರ್ಸಿ ತೊಡಬೇಕೆಂದು ಐಸಿಸಿ ಸೂಚಿಸಿದೆ. ಹೀಗಾಗಿ ನಾಳಿನ ಪಂದ್ಯದಲ್ಲಿ ಆರೆಂಜ್ ಕಲರ್ ನಲ್ಲಿ ಭಾರತ ಮಿಂಚಲಿದೆ.




Leave a Reply

Your email address will not be published. Required fields are marked *

error: Content is protected !!