ಒಲಿಂಪಿಕ್ಸ್: ತಿರಂಗ ಹಿಡಿಯಲಿದ್ದಾರೆ ಮೇರಿ, ಮನ್ ಪ್ರೀತ್

277

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಜುಲೈ 23ರಿಂದ ಟೋಕಿಯೊದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಶುರುವಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ 6 ಬಾರಿ ವಿಶ್ವ ಚಾಂಪಿಯನ್ ಆಗಿರುವ ಬಾಕ್ಸರ್ ಮೇರಿ ಕೋಮ್ ಹಾಗೂ ಪುರುಷರ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್ ಅವರು ಭಾರತದ ಬಾವುಟ ಹಿಡಿದು ಸಾಗಲಿದ್ದಾರೆ.

ಸಮಾರೋಪದಲ್ಲಿ ಕುಸ್ತಿಪಟು ಭಜರಂಗ್ ಪೂನಿಯಾ ಧ್ವಜ ಹಿಡಿಯಲಿದ್ದಾರೆ ಎಂದು ಟೋಕಿಯೊ ಒಲಿಂಪಿಕ್ಸ್ ಯೋಜನಾ ಸಮಿತಿಗೆ ಭಾರತ ಒಲಿಂಪಿಕ್ ಸಂಸ್ಥೆ ತಿಳಿಸಿದೆ. ಭಾರತದ 100ಕ್ಕೂ ಅಧಿಕ ಅಥ್ಲೀಟ್ ಗಳು ಭಾಗವಹಿಸಲಿದ್ದಾರೆ. ಆಗಸ್ಟ್ 8ರಂದು ಟೂರ್ನಿ ಮುಕ್ತಾಯವಾಗಲಿದೆ.




Leave a Reply

Your email address will not be published. Required fields are marked *

error: Content is protected !!