ಬ್ರೇಕಿಂಗ್ ನ್ಯೂಸ್
Search

5 ಬಾರಿ ವಿಶ್ವ ಚಾಂಪಿಯನ್ ಕೋಮ್ ನಿವೃತ್ತಿ

159

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಭಾರತದ ಸ್ಟಾರ್ ಬಾಕ್ಸಿಂಗ್ ಆಟಗಾರ್ತಿ ಮೇರಿ ಕೋಮ್ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ನನಗೆ ಇನ್ನು ಆಡಲು ಆಸೆ, ಶಕ್ತಿ ಇದೆ. ಆದರೆ ವಯಸ್ಸಿನ ಕಾರಣಕ್ಕೆ ಒತ್ತಾಯದಿಂದ ನಿವೃತ್ತಿ ಘೋಷಿಸುತ್ತಿದ್ದೇನೆ ಎಂದು 41 ವರ್ಷದ ಮೇರಿ ಕೋಮ್ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ನಿಯಮಗಳ ಪ್ರಕಾರ 40 ವರ್ಷಕ್ಕಿಂತ ಮೇಲಿನವರು ಬಾಕ್ಸಿಂಗ್ ನಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ ಮೇರಿ ಕೋಮ್ ತಮ್ಮ ಗ್ಲೌಸ್ ಕಳಿಚಿದ್ದಾರೆ.

5 ಬಾರಿ ವಿಶ್ವ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಮೇರಿ ಕೋಮ್, 2012ರಲ್ಲಿ ಲಂಡನ್ ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಬಾಕ್ಸರ್ ಎನ್ನುವ ಹೆಗ್ಗಳಿಕೆ ಪಡೆದಿದ್ದಾರೆ. 6ನೇ ಬಾರಿಗೆ ವಿಶ್ವ ಚಾಂಪಿಯನ್ ಆದಾಗ 8 ಬಾರಿ ಚಾಂಪಿಯನ್ ಆಗಿದ್ದ ಉಕ್ರೇನ್ ನ ಹನ್ನಾ ಓಕ್ತಾ ವಿರುದ್ಧ 5-0 ಅಂತರದಿಂದ ಅಮೋಘ ಗೆಲುವು ಸಾಧಿಸಿದ್ದರು.




Leave a Reply

Your email address will not be published. Required fields are marked *

error: Content is protected !!