ಬುಧವಾರ ಬೆಂಗಳೂರು-ಮುಂಬೈ ಫೈಟ್

291

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಬಧುವಾರ ಸಂಜೆ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವೆ ಬಿಗ್ ಫೈಟ್ ನಡೆಯಲಿದೆ. ವಿರಾಟ ಕೊಹ್ಲಿ ಬಳಗ ಹಾಗೂ ರೋಹಿತ ಶರ್ಮಾ ಟೀಂ ನಡುವಿನ ಪಂದ್ಯ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಪಾಯಿಂಟ್ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 3ನೇ ಸ್ಥಾನದಲ್ಲಿದೆ. ಹೈದ್ರಾಬಾದ್ ಜೊತೆಗಿನ ಪಂದ್ಯದಲ್ಲಿ ಡೆಲ್ಲಿ ಸೋತರೆ 3ನೇ ಸ್ಥಾನಕ್ಕೆ ಬರಲಿದೆ. ಬೆಂಗಳೂರು 2ನೇ ಸ್ಥಾನಕ್ಕೆ ಬರಲಿದೆ. ಇದರ ಜೊತೆಗೆ ಮುಂಬೈ ವಿರುದ್ಧ ಗೆದ್ದರೆ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ.

ಈ ಹಿಂದಿನ ಪಂದ್ಯಗಳಲ್ಲಿ ಮುಂಬೈ ರಾಜಸ್ಥಾನ್ ರಾಯಲ್ಸ್ ಜೊತೆ ಸೋತಿದೆ. ಆರ್ ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಸೋಲು ಅನುಭವಿಸಿದೆ. ಹೀಗಾಗಿ ಎರಡೂ ಟೀಂಗಳಿಗೆ ಈ ಗೆಲುವು ಮುಖ್ಯವಾಗಿದೆ. ಈ ಎಲ್ಲ ಕಾರಣಗಳಿಂದ ಬುಧವಾರದ ಪಂದ್ಯ ಕುತೂಹಲ ಮೂಡಿಸಿದೆ.


TAG


Leave a Reply

Your email address will not be published. Required fields are marked *

error: Content is protected !!