ಡೆಲ್ಲಿ ಬೌಲರ್ಸ್ ಬೆವರಿಳಿಸಿದ ವಾರ್ನರ್ ಪಡೆ

326

ಪ್ರಜಾಸ್ತ್ರ ಕ್ರೀಡಾ ಸುದ್ದಿ

ದುಬೈ ಇಂಟರ್ ನ್ಯಾಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯ 47 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ ಗಳನ್ನ ಸನ್ ರೈಸರ್ಸ್ ಹೈದ್ರಾಬಾದ್ ಟೀಂ ಭರ್ಜರಿಯಾಗಿ ಬೆಂಡೆತ್ತಿದೆ. ಹೀಗಾಗಿ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಬರೋಬ್ಬರಿ 219 ರನ್ ಬಾರಿಸಿದೆ.

ಕ್ಯಾಪ್ಟನ್ ಡೇವಿಡ್ ವಾರ್ನರ್ 66, ವೃದ್ಧಮಾನ್ ಶಾ 87, ಮನಿಷ ಪಾಂಡ್ಯ 44 ಹಾಗೂ ಕೇನ್ ವಿಲಿಯಮ್ಸನ್ 11 ರನ್ ಬಾರಿಸಿದ್ದಾರೆ. ಇದ್ರಿಂದಾಗಿ ಎಸ್ಆರ್ ಎಚ್ 2 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿ ಶ್ರೇಯಸ್ ಅಯ್ಯರ್ ಬಳಗಕ್ಕೆ ಬಿಗ್ ಚಾಲೆಂಜ್ ನೀಡಿದೆ.

ಡೆಲ್ಲಿ ಪರ ರವಿಂದ್ರ ಅಶ್ವಿನ್ ಹಾಗೂ ಆನ್ ರಿಚ್ ತಲಾ 1 ವಿಕೆಟ್ ಪಡೆದ್ರು. ಇನ್ನು ಡೆಲ್ಲಿ ಟೀಂ ಸರಾಸರಿ 11 ರೇಟ್ ನಂತೆ ಆಟವಾಡಿದ್ರೆ ಮಾತ್ರ ಗೆಲ್ಲಲಿದೆ.




Leave a Reply

Your email address will not be published. Required fields are marked *

error: Content is protected !!