ಐಪಿಎಲ್ ನಲ್ಲಿ ಟೇಲರ್ ಗೆ ಮಾಲೀಕರಿಂದ ಕಪಾಳಮೋಕ್ಷ!

217

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನ್ಯೂಜಿಲೆಂಡ್ ತಂಡದ ಮಾಜಿ ಸ್ಫೋಟಕ ಬ್ಯಾಟ್ಸಮನ್ ರಾಸ್ ಟೇಲರ್, ಐಪಿಎಲ್ ತಂಡದ ಮಾಲೀಕರೊಬ್ಬರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಅದೇನು ಅಂದರೆ, ಒಮ್ಮೆ ಅವರು ಡಕೌಟ್ ಆದ ಸಂದರ್ಭದಲ್ಲಿ 3-4 ಬಾರಿ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಇತ್ತೀಚೆಗೆ ಬಿಡುಗಡೆಯಾದ ಅವರ ಪುಸ್ತಕ ‘ಬ್ಲಾಕ್ ಅಂಡ್ ವೈಟ್’ನಲ್ಲಿ ಬರೆದುಕೊಂಡಿದ್ದಾರಂತೆ.

ಇದು ಟೇಲರ್ ಆತ್ಮಚರಿತ್ರೆ ಪುಸ್ತಕವಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಆಡುವಾಗ ನಾನು ಡಕೌಟ್ ಆಗಿದ್ದೆ. ಆಗ ರಾಜಸ್ಥಾನದ ರಾಯಲ್ಸ್ ತಂಡದ ಮಾಲೀಕರಲ್ಲಿ ಒಬ್ಬರು, ಹೋಟೆಲ್ ಮೇಲಿನ ಬಾರ್ನ್ ನಲ್ಲಿ, ರಾಸ್ ಡಕ್ ಔಟ್ ಆಗಲು ನಾವು ನಿಮಗೆ ಒಂದು ಮಿಲಿಯನ್ ಡಾಲರ್ ಪಾವತಿಸಿಲ್ಲವೆಂದರು. ನನ್ನ ಕಪಾಳಕ್ಕೆ 3-4 ಬಾರಿ ಬಾರಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!