ಆರ್ ಸಿಬಿ ಅಭಿಮಾನಿಗಳ ಗೆಲುವು-ಸೋಲಿನ ಜಪ

410

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಆರ್ ಸಿಬಿ ತಂಡದಲ್ಲಿ ನಾಯಕನ ಸ್ಥಾನದಿಂದ ಹಿಡಿದು ಅನೇಕ ಆಟಗಾರರ ತನಕ ಸಾಕಷ್ಟು ಬದಲಾವಣೆಗಳು ಆಗಿವೆ. ಹೀಗಿದ್ದರೂ ತಂಡದಲ್ಲಿ ಅಂತಹ ದೊಡ್ಡ ಮಟ್ಟದ ಬದಲಾವಣೆ ಕಂಡು ಬಂದಿಲ್ಲ. ಎಂದಿನಂತೆ ಮತ್ತೊಬ್ಬರ ಸೋಲು ಎದುರು ನೋಡುವ ಸ್ಥಿತಿ ಆರ್ ಸಿಬಿ ಅಭಿಮಾನಿಗಳದ್ದು.

ಮೊದಲ ಬಾರಿಗೆ ಐಪಿಎಲ್ ನಲ್ಲಿ ಆಡುತ್ತಿರುವ ಗುಜರಾತ್ ಟೈಟನ್ಸ್ ಈಗಾಗ್ಲೇ 13ರಲ್ಲಿ 10 ಗೆದ್ದು 20 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಇದರ ವಿರುದ್ಧ ಗುರುವಾರ ಆರ್ ಸಿಬಿ ಕಣಕ್ಕೆ ಇಳಿಯಲಿದೆ. ಈ ಪಂದ್ಯದಲ್ಲಿ ಗೆಲ್ಲುವುದರ ಜೊತೆಗೆ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಎದುರು ನೋಡಬೇಕಿದೆ.

13 ಪಂದ್ಯಗಳಲ್ಲಿ ತಲಾ 8 ಪಂದ್ಯಗಳನ್ನು ಗೆದ್ದಿರುವ ರಾಜಸ್ಥಾನ್ ರಾಯಲ್ಸ್, ಲಖ್ನೋ ಸೂಪರ್ ಜಯಂಟ್ಸ್ 16 ಪಾಯಿಂಟ್ ಗಳೊಂದಿಗೆ 2 ಹಾಗೂ 3ನೇ ಸ್ಥಾನದಲ್ಲಿವೆ. ಡೆಲ್ಲಿ ಹಾಗೂ ಆರ್ ಸಿಬಿ 14 ಪಾಯಿಂಟ್ ಗಳೊಂದಿಗೆ 4 ಮತ್ತು 5ನೇ ಸ್ಥಾನದಲ್ಲಿವೆ. ಈ ಎರಡು ತಂಡಗಳಲ್ಲಿ ಒಂದು ತಂಡ ಪ್ಲೇ ಆಫ್ ಗೆ ಬರಬೇಕು ಅಂದರೆ, ಕೊನೆಯ ಪಂದ್ಯ ಗೆಲ್ಲಲೇಬೇಕು.

ಆರ್ ಸಿಬಿ ಗುಜರಾತ್ ಜೊತೆಗೆ ಗೆಲ್ಲುವುದರೊಂದಿಗೆ ಮುಂಬೈ ಎದುರು ಡೆಲ್ಲಿ ಸೋಲಬೇಕಿದೆ. ಆಗ ಬೆಂಗಳೂರು ತಂಡ ಪ್ಲೇ ಆಫ್ ಗೆ ಹೋಗಲಿದೆ. ಒಂದೇ ವೇಳೆ ಎರಡೂ ತಂಡ ಗೆದ್ದರೆ ರನ್ ರೇಟ್ ಮೇಲೆ ಡೆಲ್ಲಿ ಪ್ಲೇ ಆಫ್ ಗೆ ಆರ್ ಸಿಬಿ ಮನೆಗೆ. ಹೀಗಾಗಿ ಆರ್ ಸಿಬಿ ಅಭಿಮಾನಿಗಳು ಎರಡು ರೀತಿಯಲ್ಲಿ ಜಪ ಮಾಡಬೇಕಿದೆ.

ಇನ್ನು ಆರ್ ಸಿಬಿ, ಡೆಲ್ಲಿ ಎರಡೂ ಸೋತರೆ ಅತ್ತ ಪಂಜಾಬ್ ಹಾಗೂ ಕೊಲ್ಕತ್ತಾ ಎರಡು ಗೆದ್ದರೆ ನಾಲ್ಕು ತಂಡಗಳ ಅಂಕ ಒಂದೇ ಆಗುತ್ತೆ. ಆರ್ ಸಿಬಿ ಬಿಟ್ಟರೆ ಉಳಿದ ಮೂರು ತಂಡಗಳ ಪಾಸಿಟಿವ್ ರೇಟ್ ಚೆನ್ನಾಗಿವೆ. ಹೀಗಾಗಿ ಆರ್ ಸಿಬಿ ಪ್ಲೇ ಆಫ್ ಗೆ ಹೋಗುತ್ತಾ ಅನ್ನೋ ಟೆನ್ಷನ್ ಅಭಿಮಾನಿಗಳಲ್ಲಿದೆ.


TAG


Leave a Reply

Your email address will not be published. Required fields are marked *

error: Content is protected !!