ಹುಲಿಹೈದರ ಘರ್ಷಣೆ: ಇಂದು ಮತ್ತೆ 12 ಜನರ ಬಂಧನ

142

ಪ್ರಜಾಸ್ತ್ರ ಸುದ್ದಿ

ಕನಕಗಿರಿ: ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದರು. ಈ ಸಂಬಂಧ ಶನಿವಾರ ಮತ್ತೆ 12 ಜನರ ಬಂಧನವಾಗಿದೆ. ಇದರೊಂದಿಗೆ ಇಲ್ಲಿಯವರೆಗೂ 22 ಜರನ್ನು ಬಂಧಿಸಲಾಗಿದೆ.

ಎರಡು ಪ್ರಕರಣ ಸಂಬಂಧ ಒಟ್ಟು 58 ಆರೋಪಿಗಳ ಹೆಸರು ಪಟ್ಟಿಯಲ್ಲಿದೆ. ಇನ್ನು ಆಗಸ್ಟ್ 20ರ ತನಕ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮೊಹರಂ ಹಬ್ಬದ ಹಿನ್ನೆಲೆ ಗ್ರಾಮದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಅದರ ಆಧಾರದ ಮೇಲೆ ಆರೋಪಿಗಳ ಬಂಧನ ಕಾರ್ಯ ನಡೆದಿದೆ. ಯಂಕಪ್ಪ ತಳವಾರ ಕೊಲೆ ಸಂಬಂಧ 10, ಪಾಶಾವಲಿ ಹತ್ಯೆ ಸಂಬಂಧ 12 ಜನರನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!