ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಗೆ ಎನ್ ಸಿಬಿ ನೋಟಿಸ್ ನೀಡಿದೆ. ದೀಪಿಕಾ ಮ್ಯಾನೇಜರ್ ಕರಿಷ್ಮಾ ನಾಪತ್ತೆಯಾಗಿದ್ದು, ಅವರ ಮನೆಗೆ ನೋಟಿಸ್ ಅಂಟಿಸಲಾಗಿದೆ.
ಮುಂಬೈನಲ್ಲಿರುವ ಕರಿಷ್ಮಾ ಮನೆಯಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಆಕೆ ನಾಪತ್ತೆಯಾಗಿದ್ದು, ಎನ್ ಸಿಬಿ ನೋಟಿಸ್ ನೀಡಿದೆ. ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಕುಲ್ ಪ್ರೀತಿ ಸಿಂಗ್ ಮತ್ತು ಶ್ರದ್ಧಾ ಕಪೂರಳನ್ನ ಮಾದಕವಸ್ತು ನಿಯಂತ್ರಣ ವಿಭಾಗದ ಅಧಿಕಾರಿಗಳು ಈಗಾಗ್ಲೇ ವಿಚಾರಣೆ ನಡೆಸಿದ್ದಾರೆ.