ಸಿಂದಗಿ ತಹಶೀಲ್ದಾರ್ ಕಚೇರಿಯ ಅಂದರ್ ಬಾಹರ್ ಕಹಾನಿ

844

ಸಿಂದಗಿ: ಇತ್ತೀಚೆಗಷ್ಟೇ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿನ ಶೌಚಾಲಯದ ಸ್ಟೋರಿ ಬಗ್ಗೆ ಇದೇ ನಿಮ್ಮ ಪ್ರಜಾಸ್ತ್ರ ವೆಬ್ ಪತ್ರಿಕೆಯಲ್ಲಿ ಓದಿದ್ದೀರಿ. ಇದು ಕಚೇರಿ ಅಂದರ್ ಬಾಹರ್ ಸ್ಟೋರಿ. ಇಂದು ಎರಡನೇ ಶನಿವಾರ. ಎಲ್ಲ ಸರ್ಕಾರಿ ಕಚೇರಿಗಳಿಗೆ ರಜೆ ಇರುತ್ತೆ. ಆದ್ರೆ, ತಹಶೀಲ್ದಾರ್ ಕಚೇರಿಯ ಒಳಗೆ ಮಾತ್ರ ಒಂದಿಷ್ಟು ಕೆಲಸಗಳು ನಡೆಯುತ್ತಿವೆ.

ಕಚೇರಿ ಒಳಗಡೆ ಕಂಡ ಸಾರ್ವಜನಿಕರು

ಕೆಲಸ ಮಾಡ್ತಿರುವ ತಹಶೀಲ್ದಾರ್ ಕಚೇರಿ ಸಿಬ್ಬಂದಿಯನ್ನ ವಿಚಾರಿಸಿದ್ರೆ ಇಂದು ರಜೆಯಿದೆ ಅಂತಾರೆ. ಸಾರ್ವಜನಿಕರಿಗೆ ಸೇವೆ ನೀಡ್ತಿರಾ ಅಂದ್ರೆ ಇಲ್ಲ ಅಂತಾರೆ. ಕಚೇರಿಯ ಒಳಗೆ ಒಂದು ರೌಂಡ್ ಹೊಡೆದ್ರೆ ಅಲ್ಲಲ್ಲಿ ಸಾರ್ವಜನಿಕರು ಕಾಣಿಸ್ತಾರೆ. ತಮ್ಮ ದಾಖಲೆ ಪತ್ರಗಳನ್ನ ಹಿಡಿದುಕೊಂಡು, ಸಹಿ ಮಾಡಿಸಿಕೊಳ್ಳುವ ಕೆಲಸಕ್ಕೆ ಓಡಾಡ್ತಿದ್ರು. ಈ ಬಗ್ಗೆ ತಹಶೀಲ್ದಾರ್ ಅವರನ್ನ ಕೇಳಿದಾಗ ಅವರು ಹೇಳಿದ್ದು ಹೀಗೆ.

ಕೆಲಸದಲ್ಲಿ ತೊಡಗಿರುವ ಸಿಬ್ಬಂದಿ

ಡಾಟಾ ಎಂಟ್ರಿ ಕೆಲಸಗಳು ನಡೆಯುತ್ತಿರುತ್ತವೆ. ಸಿಬ್ಬಂದಿ ಅದರ ಕಾರ್ಯದಲ್ಲಿ ಇರುತ್ತಾರೆ. ಈ ವೇಳೆ ಇಂದು ರಜೆಯಿರುವುದು ಗೊತ್ತಿಲ್ಲದೆ ಕೆಲವು ಜನರು ಬರ್ತಾರೆ.  ಇವತ್ತು ರಜೆಯಿದೆ. ನಾಳೆ ಬಾ ಎಂದು ಹೇಳಲು ಆಗೋದಿಲ್ಲ. ಹೀಗಾಗಿ ಸಣ್ಣಪುಟ್ಟ ಕೆಲಸಗಳನ್ನ ಮಾಡಿಕೊಡಲಾಗುತ್ತೆ. ಇಲ್ದೇ ಹೋದ್ರೆ ನಾಳೆ ಇದು ಸಹ ಸಮಸ್ಯೆಯಾಗುತ್ತೆ ಅಂತಾ ಹೇಳಿದ್ರು.

ಕಡಭಾವಿ, ತಹಶೀಲ್ದಾರ್, ಸಿಂದಗಿ

ಕಚೇರಿ ಹೊರಗೆ ಜಮೀನು ಕೆಲಸ

ಇನ್ನು ಕಚೇರಿ ಪಕ್ಕದಲ್ಲಿ ಸರ್ವೆ ಅಧಿಕಾರಿಯೊಬ್ಬರು ಜಮೀನೊಂದರ ಕೆಲಸ ಮಾಡ್ತಿರೋದು ಕಂಡು ಬಂತು. ಜಮೀನಿಗೆ ಸಂಬಂಧಿಸಿದ ಒಂದಿಬ್ಬರು ವ್ಯಕ್ತಿಗಳು ಇಲ್ಲದಿದ್ರೂ, ಬಂದವರಲ್ಲಿಯೇ ಒಬ್ಬರಿಂದ ಹೆಬ್ಬಟ್ಟು, ಮತ್ತೊಬ್ಬರಿಂದ ಸಹಿ ಮಾಡಿಸಿಕೊಂಡ್ರು. ಈ ಬಗ್ಗೆ ಕೇಳಿದ್ರೆ, ಏನಾದ್ರೂ ಸಮಸ್ಯೆಯಾದ್ರೆ ಅವರು ನೋಡಿಕೊಳ್ತಾರೆ ಅಂತಾ ಹೇಳಿ ಅಲ್ಲಿಂದ ಹೊರಟು ಹೋದ್ರು. ಈ ಬಗ್ಗೆ ತಹಶೀಲ್ದಾರ್ ಕಡಕಭಾವಿ ಅವರನ್ನ ಕೇಳಿದ್ರೆ ಜನರಲ್ ಆಗಿ ಹೇಳಿದ್ರೆ ಗೊತ್ತಾಗುವುದಿಲ್ಲ. ಇಂಥಾ ಪ್ರಕರಣ ಅಂತಾ ಹೇಳಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ ಅಂತಾ ಹೇಳಿದ್ರು.

ಕಚೇರಿ ಪಕ್ಕದಲ್ಲಿ ಜಮೀನು ವಿಚಾರವಾಗಿ ಸಹಿ ಮಾಡ್ತಿರುವ ವ್ಯಕ್ತಿ

ಕಚೇರಿ ಒಳಗೆ ಬಟ್ಟೆ ತೊಳೆಯುವುದು

ಕಚೇರಿ ಒಳಗೆ ಹತ್ತಾರು ಜನ ಸಿಬ್ಬಂದಿ ಕೆಲಸ ಮಾಡ್ತಿದ್ರೂ, ಮಹಿಳೆಯೊಬ್ಬರು ಅಲ್ಲಿಯೇ ಬಟ್ಟೆ ತೊಳೆಯುವ ದೃಶ್ಯ ಕಂಡಿತು. ಈ ಬಗ್ಗೆ ಕೇಳಿದ್ರೆ, ನೀರಿಲ್ಲ ಸರ್. ಅದ್ಕೆ ಇಲ್ಲಿ ಬಂದು ಬಟ್ಟೆ ತೊಳೆಯುತ್ತಿದ್ದೀನ್ರಿ ಅಂತಾ ಹೇಳಿದ್ರು. ತಹಶೀಲ್ದಾರ್ ಕಚೇರಿ ಅನ್ನೋ ಭಯವಿಲ್ಲ. ಆರಾಮಾಗಿ ಅಲ್ಲಿರುವ ಟ್ಯಾಂಕ್ ನೀರು ತೆಗೆದುಕೊಂಡು ಬಟ್ಟೆ ತೊಳೆಯುತ್ತಾರೆ.

ತಹಶೀಲ್ದಾರ್ ಕಚೇರಿ ಒಳಗೆ ಬಟ್ಟೆ ತೊಳೆಯುತ್ತಿರುವ ಮಹಿಳೆ

ಇದನ್ನ ಮಾನವೀಯತೆ ದೃಷ್ಟಿಯಿಂದ ನೋಡಿದಾಗ, ಸಿಂದಗಿ ಪಟ್ಟಣದಲ್ಲಿ ನೀರಿನ ಸಮಸ್ಯೆ ಎಷ್ಟಿದೆ ಅನ್ನೋದು ಗೊತ್ತಾಗುತ್ತೆ. ಜನರಿಗೆ ನೀರು ಒದಗಿಸಿಕೊಡಬೇಕಾದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದ್ರೆ, ಹೀಗೆ ಸರ್ಕಾರಿ ಕಚೇರಿ ಒಳಗೆ ಬಂದು ಬಟ್ಟೆ ತೊಳೆದುಕೊಂಡು ಹೋಗುವ ಪರಿಸ್ಥಿತಿ ಬರ್ತಿರಲಿಲ್ಲ. ಇದೊಂದು ಸರ್ಕಾರದ ವ್ಯವಸ್ಥೆಯನ್ನ ಅಣಕಿಸಿದಂತಿದೆ. ಈ ಬಗ್ಗೆ ತಹಶೀಲ್ದಾರ್ ಅವರನ್ನ ಕೇಳಿದ್ರೆ, ನೀವು ಗಮನಕ್ಕೆ ತಂದಿರೋದು ಒಳ್ಳೆಯದು. ಈ ಬಗ್ಗೆ ನಾನು ಈಗ್ಲೇ ವಿಚಾರಿಸುತ್ತೇನೆ ಅಂತಾ ಹೇಳಿದ್ರು. ಇದು ಸಿಂದಗಿ ತಹಶೀಲ್ದಾರ್ ಕಚೇರಿಯ ಅಂದರ್ ಬಾಹರ್ ಸ್ಟೋರಿ.

ತಹಶೀಲ್ದಾರ್ ಕಚೇರಿ ಸಿಬ್ಬಂದಿ
ತಹಶೀಲ್ದಾರ್ ಕಚೇರಿ ಸಿಬ್ಬಂದಿ
ತಹಶೀಲ್ದಾರ್ ಕಚೇರಿ ಪಕ್ಕದಲ್ಲಿಯೇ ಜಮೀನು ಕೆಲಸ ನಡೆಯುತ್ತಿರುವುದು

TAG


Leave a Reply

Your email address will not be published. Required fields are marked *

error: Content is protected !!