ಸಿಂದಗಿಯಲ್ಲಿ ನೀರು ಮಾರಾಟ.. ಪುರಸಭೆ ಮುತ್ತಿಗೆ.. ಖಾಕಿ ಪಡೆ ಎಂಟ್ರಿ

705

ಸಿಂದಗಿ: ಸಿಂದಗಿ ನಗರದಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ. ಕುಡಿಯುವ ನೀರಿಗಾಗಿ ಜನರ ಪರದಾಟ ಹೇಳತೀರದು. ಇದರ ನಡುವೆ ಕೆಲವು ಜನ ಬೋರ್ ವೆಲ್ ಮೂಲಕ ನೀರು ಮಾರಾಟ ಮಾಡ್ತಿರೋದು ಸಾಮಾನ್ಯವಾಗಿದೆ. ಇದೇ ರೀತಿ ಪಟ್ಟಣದ 7ನೇ ವಾರ್ಡ್ ನಲ್ಲಿ ನೀರು ಮಾರಾಟ ಮಾಡ್ತಿರೋದನ್ನ ಖಂಡಿಸಿ ಸಾವಿರಾರು ಜನ ಪುರಸಭೆ ಮುತ್ತಿಗೆ ಹಾಕಿದ್ರು.

ಪುರಸಭೆ ಎದುರು ಜಮಾಯಿಸಿರುವ ಪ್ರತಿಭಟನಾಕಾರರು

7ನೇ ವಾರ್ಡ್ ನಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಅವರಿಗೆ ಇರೋದು ಒಂದೇ ಒಂದು ಬೋರ್. ಅದು ಕಳೆದ 25 ವರ್ಷಗಳಿಂದ ಜನರಿಗೆ ನೀರು ನೀಡುತ್ತಿದೆ. ಈಗ ಖಾಸಗಿಯಾಗಿ ಬೋರ್ ಹಾಕಿಸಿರುವ ವ್ಯಕ್ತಿಯೊಬ್ಬರು ನೀರು ಮಾರಾಟ ಮಾಡ್ತಿರೋದ್ರಿಂದ, ನಮ್ಗೆ ನೀರು ಬರುತ್ತಿಲ್ಲ. ಬೋರ್ ಸಂಪೂರ್ಣವಾಗಿ ನಿಂತು ಹೋಗಿದ್ದು, ಜನರು ಕುಡಿಯುವ ನೀರಿಗಾಗಿ ಪರದಾಡ್ತಿದ್ದಾರೆ ಅಂತಾ ಹೇಳಿ, ಪುರಸಭೆಗೆ ಮುತ್ತಿಗೆ ಹಾಕಿದ್ರು.

ಪುರಸಭೆ ಒಳಗೆ ಸೇರಿರುವ ಜನತೆ

ಇಂದು ಎರಡನೇ ಶನಿವಾರವಾದ ಕಾರಣ ಮುಖ್ಯಾಧಿಕಾರಿ ಕಚೇರಿಯಲ್ಲಿ ಇರ್ಲಿಲ್ಲ. ಆಗ ಆರೋಗ್ಯಾಧಿಕಾರಿ ಪಾಂಡೆ, ಪೊಲೀಸ್ ಅಧಿಕಾರಿ ಅವರು ವಾರ್ಡ್ ಮುಖಂಡರೊಂದಿಗೆ ಮಾತ್ನಾಡಿದ್ರು. ಪುರಸಭೆ ಮುಖ್ಯಾಧಿಕಾರಿ ಜೊತೆ ಫೋನ್ ನಲ್ಲಿ ಮಾತ್ನಾಡಿದ ಬಳಿಕ, ಪುರಸಭೆ ಆರೋಗ್ಯಾಧಿಕಾರಿ ಪಾಂಡೆ, ಪೊಲೀಸ್ರು ಹಾಗೂ ಕೆಇಬಿ ಸಿಬ್ಬಂದಿ ಸಮೇತ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ರು. ನೀರು ಮಾರಾಟ ಮಾಡ್ತಿರುವ ವ್ಯಕ್ತಿಯನ್ನ ಕರೆಸಿಕೊಂಡು ವಿಚಾರಣೆ ನಡೆಸಲಾಯ್ತು. ನಾನು ನೀರು ಮಾರಾಟ ಮಾಡ್ತಿಲ್ಲ. ನನ್ನ ಹೊಲಗಳಿಗೆ ನೀರು ತೆಗೆದುಕೊಂಡು ಹೋಗ್ತಿದ್ದೇನೆ. ಬೆಳೆಗಳು ಒಣಗ್ತಿದ್ದು, ನೀರು ತೆಗೆದುಕೊಂಡು ಹೋಗ್ತೀನಿ ಅಂತಾ ಹೇಳಿದ್ರು. ಆಗ ವಾದ, ವಾಗ್ವಾದ ನಡೆಯ್ತು.

ಆರೋಗ್ಯ ಅಧಿಕಾರಿ, ಪೊಲೀಸ್ ಅಧಿಕಾರಿ ಜೊತೆ ಮುಖಂಡರ ಚರ್ಚೆ

ಖಾಸಗಿ ಬೋರ್ ವೆಲ್ ಮಾಲೀಕರು ನೀರು ತೆಗೆದುಕೊಂಡು ಹೋದ್ರೆ, ನಾಳೆ ಏನಾದ್ರು ಆದ್ರೆ ನಾವು ಜವಾಬ್ದಾರರಲ್ಲ ಅಂತಾ ಎಚ್ಚರಿಸಿದ್ರು. ಬಳಿಕ ಆತ ಅವರಿಗೂ ನೀರು ಬಿಡುತ್ತೇನೆ ಅಂದ್ರೂ ಅವರ್ಯಾರೂ ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಬರುತ್ತೆ ಅಂದಾಗ, ಇನ್ಮುಂದೆ ಟ್ಯಾಂಕರ್ ಮೂಲಕ ನೀರು ತೆಗೆದುಕೊಂಡು ಹೋಗುವುದಿಲ್ಲ ಅಂತಾ ಹೇಳಿದ್ರು. ಬಳಿಕ ಸ್ಥಳೀಯರು ಪುರಸಭೆ ಆರೋಗ್ಯ ಅಧಿಕಾರಿ ಪಾಂಡೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯ್ತು.

ಬೋರ್ ವೆಲ್ ಮಾಲೀಕನೊಂದಿಗೆ ವಾಗ್ವಾದ
ಬಂದ್ ಆಗಿರುವ ಬೋರ್
ಪುರಸಭೆ ಆರೋಗ್ಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಕೆ



Leave a Reply

Your email address will not be published. Required fields are marked *

error: Content is protected !!