ನಾಳೆಯೇ ಉದ್ಧವ್ ಠಾಕ್ರೆ ಪ್ರಮಾಣ ವಚನ!

319

ಮುಂಬೈ: ಸಾಕಷ್ಟು ಹಗ್ಗಜಗ್ಗಾಟ. ಅಧಿಕಾರದ ಹಪಾಹಪಿತನ. ಬಿಜೆಪಿಗೆ ಮುಖಭಂಗವಾಗಿ ಕೊನೆಗೆ ಮಹಾ ಮೈತ್ರಿ ಸರ್ಕಾರ ರಚನೆಯಾಗ್ತಿದೆ. ಅದರಂತೆ ಶಿವಸೇನೆ ಮುಖ್ಯಸ್ಥೆ ಉದ್ಧವ್ ಠಾಕ್ರೆ ನಾಳೆಯೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡ್ತಿದ್ದಾರೆ.

ಡಿಸೆಂಬರ್ 1ರಂದು ಪ್ರಮಾಣ ವಚನ ಕಾರ್ಯಕ್ರಮವೆಂದು ಹೇಳಲಾಗಿತ್ತು. ಅದು ಬದಲಾಗಿ ನಾಳೆಯೇ ಶಿವಾಜಿ ಪಾರ್ಕ್ ನಲ್ಲಿ ಹೊಸ ಸರ್ಕಾರ ಉದಯಿಸ್ತಿದೆ. ಉದ್ಧವ್ ಠಾಕ್ರೆ ಜೊತೆಗೆ ಮೈತ್ರಿ ಪಕ್ಷಗಳಾದ ಎನ್ ಸಿಪಿ ಹಾಗೂ ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದ್ರೆ, ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಯುವ ನಾಯಕ ರಾಹುಲ ಗಾಂಧಿ ಗೈರಾಗ್ತಿದ್ದಾರೆ ಅಂತಾ ಎಐಸಿಸಿ ಮೂಲಗಳಿಂದ ತಿಳಿದು ಬಂದಿದೆ.

ಸಿಎಂ ಹಾಗೂ ಸಚಿವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಹಲವು ಹಿರಿಯ ನಾಯಕರು, ನೆರೆಯ ರಾಜ್ಯಗಳ ಮುಖಂಡರು ಸಹ ಭಾಗಹಿಸ್ತಿದ್ದಾರೆ. ಠಾಕ್ರೆ ಕುಡಿಯೊಂದು ಸಿಎಂ ಆಗ್ತಿರುವ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಸಾಕ್ಷಿಯಾಗ್ತಿದ್ದಾರೆ. ಆದ್ರೆ, ರಾಹುಲ ಗಾಂಧಿ ಗೈರು ಎನ್ನಲಾಗ್ತಿದೆ.

ಮಹಾ ನಾಡಿನಲ್ಲಿ ಬಹುದೊಡ್ಡ ರಾಜಕೀಯ ಮೇಲಾಟ ನಡೆಯಿತು. ಅಜಿತ ಪವಾರ ನಂಬಿದ ಬಿಜೆಪಿಗೆ ಬಹುದೊಡ್ಡ ಮುಖಭಂಗವಾಯ್ತು. ಸುಪ್ರೀಂ ಕೋರ್ಟ್ ನೀಡಿದ್ದ ಡೆಡ್ ಲೈನ್ ಮೊದ್ಲೇ ದೇವೇಂದ್ರ ಫಡ್ನಾವಿಸ್ ರಾಜೀನಾಮೆ ಸಲ್ಲಿಸಿ ಶಸ್ತ್ರತ್ಯಾಗ ಮಾಡಿದ್ರು. ಯಾಕಂದ್ರೆ, ಇದರ ಹೊರತು ಅವರ ಬಳಿ ಯಾವುದೇ ಆಯ್ಕೆಗಳೇ ಇರ್ಲಿಲ್ಲ. ಈ ಎಲ್ಲ ಹೈ ಡ್ರಾಮ್ ಮುಗಿದು ನಾಳೆ ಮೂರು ಪಕ್ಷಗಳ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗ್ತಿದೆ.




Leave a Reply

Your email address will not be published. Required fields are marked *

error: Content is protected !!