ಐತಿಹಾಸಿಕ ತಾಣಗಳಲ್ಲಿ ಮಹಿಳೆಯರಿಗೆ ನಾಳೆ ಫ್ರೀ ಎಂಟ್ರಿ

445

ನವದೆಹಲಿ: ಮಾರ್ಚ್ 8 ವಿಶ್ವ ಮಹಿಳಾ ದಿನಚಾರಣೆ ಅಂಗವಾಗಿ ದೇಶದಲ್ಲಿರುವ ಸಂರಕ್ಷಿತ ಪ್ರವಾಸಿ ತಾಣಗಳಿಗೆ ಮಹಿಳೆಯರಿಗೆ ಉಚಿತ ಪ್ರವೇಶವಿರಲಿದೆ. ಈ ಬಗ್ಗೆ ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಮಹಿಳಾ ದಿನಾಚರಣೆ ನಿಮಿತ್ಯ ಭಾನುವಾರ ಕೇಂದ್ರ ಸಂರಕ್ಷಿತ ತಾಣಗಳಿಗೆ ಉಚಿತ ಪ್ರವೇಶವಿರಲಿದೆ ಎಂದು ಸುತ್ತೋಲೆ ಹೊರಡಿಸಿದೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರನ್ನ ದೇವತೆಯೆಂದು ಪೂಜಿಸಲಾಗುತ್ತೆ. ಇದು ನಮ್ಮ ದೇಶದ ಮಹಿಳೆಗೆ ನೀಡುವ ಗೌರವ. ಹೀಗಾಗಿ ಮಾರ್ಚ್ 8 ರಂದು ದೇಶದ ಎಲ್ಲ ಸ್ಮಾರಕಗಳಲ್ಲಿ ಮಹಿಳೆಯರಿಗೆ ಉಚಿತ ಪ್ರವೇಶ ಇರಲಿದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ ಸಿಂಗ್ ತಿಳಿಸಿದ್ದಾರೆ.

ದೇಶದ ಯಾವುದೇ ಭಾಗದಲ್ಲಿರುವ ಸಂರಕ್ಷಿತ ಪ್ರವಾಸಿ ತಾಣಗಳಿಗೆ ಉಚಿತ ಪ್ರವೇಶವಿದ್ದು, ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳಬಹುದು. ಭಾನುವಾರದ ರಜೆಯ ಜೊತೆ ಮಹಿಳಾ ದಿನಾಚರಣೆಯನ್ನ ಖುಷಿ ಖುಷಿಯಾಗಿ ಆಚರಣೆ ಮಾಡಬಹುದಾಗಿದೆ.




Leave a Reply

Your email address will not be published. Required fields are marked *

error: Content is protected !!