ಟ್ರಂಪ್ ಸ್ವಾಗತಕ್ಕೆ ಕ್ಷಣಗಣನೆ

335

ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುಟುಂಬ ಸಮೇತರಾಗಿ ಭಾರತಕ್ಕೆ ಆಗಮಿಸ್ತಿದ್ದು, ಗುಜರಾತನ ಅಹಮದಾಬಾದ್ ಗೆ ಕೆಲವು ಕ್ಷಣಗಳಲ್ಲಿ ಆಗಮಿಸಲಿದ್ದಾರೆ. ಇಲ್ಲಿನ ಸರ್ದಾರ್ ವಲ್ಲಭಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊಟೆರಾ ಸ್ಟೇಡಿಯಂವರೆಗೂ ಪ್ರಧಾನಿ ಮೋದಿ ಜೊತೆ ರೋಡ್ ಶೋ ನಡೆಸಲಿದ್ದಾರೆ.

ಟ್ರಂಪ್ 2 ದಿನದ ಪ್ರವಾಸದ ಕಂಪ್ಲೀಟ್ ಲಿಸ್ಟ್
ಸೋಮವಾರದ ಕಾರ್ಯಕ್ರಮ
11.40ಕ್ಕೆ ಸರ್ದಾರ್ ವಲ್ಲಾಭಾಯ್ ಪಟೇಲ್ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಗೆ ಆಗಮನ
12.15ಕ್ಕೆ ಸಾಬರಮತಿ ಆಶ್ರಮ ಭೇಟಿ
1.05ಕ್ಕೆ ಮೊಟೆರಾ ಸ್ಟೇಡಿಯಂನಲ್ಲಿ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ 5.15ಕ್ಕೆ ಆಗ್ರಾ ಭೇಟಿ. ತಾಜ್ ಮಹಲ್ ವೀಕ್ಷಣೆ
6.45ಕ್ಕೆ ದೆಹಲಿ ಪ್ರಯಾಣ
ಫೆಬ್ರವರಿ 25 ಮಂಗಳವಾರದ ಕಾರ್ಯಕ್ರಮ
ಬೆಳಗ್ಗೆ 10ಕ್ಕೆ ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತ
10.30ಕ್ಕೆ ಮಹಾತ್ಮ ಗಾಂಧಿ ಸ್ಮಾರಕ ಭೇಟಿ
11ಕ್ಕೆ ಹೈದ್ರಾಬಾದ್ ಹೌಸ್ ನಲ್ಲಿ ಮೋದಿ-ಟ್ರಂಪ್ ಮಾತುಕತೆ
ಸಂಜೆ 7.30ಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ ಭೇಟಿ
ರಾತ್ರಿ 10ಕ್ಕೆ ವಾಪಸ್ ಅಮೆರಿಕ ಪ್ರಯಾಣ

ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಸೇರಿದಂತೆ ಅಮೆರಿಕ ನಿಯೋಗದೊಂದಿಗೆ ಬರ್ತಿದ್ದು, ಈಗಾಗ್ಲೇ ನವದೆಹಲಿ ಹಾಗೂ ಅಹಮದಾಬಾದ್ ನಗರನ್ನ ಫುಲ್ ಹೈಸೆಕ್ಯೂರಿಟಿಯೊಂದಿಗೆ ಸಜ್ಜಗೊಳಿಸಲಾಗಿದೆ. ಸ್ಟೇಡಿಯಂ ಕಾರ್ಯಕ್ರಮ ಮುಗಿದ್ಮೇಲೆ ತಾಜ್ ಮಹಲ್ ಭೇಟಿ ನೀಡಲಿದ್ದಾರೆ. ಇದಾದ್ಮೇಲೆ ಸಂಜೆ ದೆಹಲಿಗೆ ಪಯಣ ಬೆಳಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!