ಯುದ್ಧನೌಕೆಗೆ ಮೊದಲ ಬಾರಿಗೆ ಮಹಿಳಾ ಪೈಲೆಟ್ ನೇಮಕ

318

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಯುದ್ಧನೌಕೆಗೆ ಇಬ್ಬರು ಮಹಿಳಾ ಪೈಲಟ್ ಗಳನ್ನ ನೇಮಿಸಲಾಗಿದೆ. ಇಂದು ಕೊಚ್ಚಿಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕೃತವಾಗಿ ಇಬ್ಬರು ಮಹಿಳಾ ಪೈಲೆಟ್ ಗಳನ್ನ ನೇಮಕ ಮಾಡಲಾಗಿದೆ.

ಸಬ್ ಲೆಫ್ಟಿನೆಂಟ್ ಗಳಾದ ಕುಮುದಿನಿ ತ್ಯಾಗಿ ಹಾಗೂ ರಿತಿ ಸಿಂಗ್ ಅವರು ಐಎನ್ಎಸ್ ಗುರುಡ ಪಡೆಗೆ ಇಂದು ಸೇರ್ಪಡೆಗೊಂಡರು. ಶತ್ರುಗಳ ಜಲಾಂತರ್ಗಾಮಿ ನೌಕೆಗಳನ್ನ ಪತ್ತೆಹಚ್ಚಲು ರೆಡಿ ಮಾಡಲಾಗಿರುವ ಎಂಹೆಚ್ 60 ಆರ್ ಹೆಲಿಕಾಪ್ಟರ್ ನ ಈ ಇಬ್ಬರು ಅಧಿಕಾರಿಗಳು ಮುನ್ನಡೆಸಲಿದ್ದಾರೆ.

ನಿನ್ನೆ ವಾಯುಸೇನೆಯ ರಫೇಲ್ ಯುದ್ಧ ವಿಮಾನಕ್ಕೆ ಓರ್ವ ಮಹಿಳಾ ಫೈಟರ್ ಪೈಲೆಟ್ ನೇಮಿಸಲಾಗಿದೆ. ಇಂದು ಯುದ್ಧ ನೌಕಾಪಡೆಯಲ್ಲಿ ಇಬ್ಬರು ಮಹಿಳೆಯರು ಸೇಪರ್ಡೆಗೊಳ್ಳುವ ಮೂಲಕ ನಾವು ಯಾರಿಗೂ ಕಮ್ಮಿಯಿಲ್ಲ ಅನ್ನೋದನ್ನ ತೋರಿಸಿಕೊಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!