ಸಿಂಪಲ್ ಹುಡ್ಗಿಯ 2ನೇ ಇನ್ನಿಂಗ್ಸ್ ಗೆ ಸಿಕ್ತು ‘ರಹದಾರಿ’

358

ನಟಿ ಶ್ವೇತಾ ಶ್ರೀವಾತ್ಸವ ಇದೀಗ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸಿಂಪಲಾಗೊಂದು ಲವ್ ಸ್ಟೋರಿ ಚಿತ್ರದ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡ ನಟಿ. ಬಳಿಕ ಕಿರುಗೂರಿನ ಗಯ್ಯಾಳಿ ಸಿನ್ಮಾದ ಮೂಲಕ ವಿಭಿನ್ನ ನಟಿ ಅಂತಾ ತೋರಿಸಿಕೊಟ್ಟಿದ್ರು.

ಇದಾದ ಬಳಿಕ ನಟಿ ಶ್ವೇತಾ ಶ್ರೀವಾತ್ಸವ ಕಾಣಿಸಿಕೊಳ್ಳಲಿಲ್ಲ. ಮದುವೆ, ಸಂಸಾರ, ಮಗು ಅಂತಾ ಖುಷಿಯಾಗಿದ್ರು. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದ ನಟಿ ಇದೀಗ ‘ರಹದಾರಿ’ ಸಿನ್ಮಾದ ಮೂಲಕ 2ನೇ ಆಟ ಶುರು ಮಾಡ್ತಿದ್ದಾರೆ. ಹೊಸ ಚಿತ್ರದ ಪೋಸ್ಟರ್ ನ್ನ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಗಿರೀಶ ವೈರಮುಡಿ ನಿರ್ದೇಶನದ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!