ಉಕ್ರೇನ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಮಾಡಿದ ಮನವಿ ಏನು?

217

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್ ಸ್ಕಿ ಅವರೊಂದಿಗೆ ಪ್ರಧಾನಿ ಮೋದಿ ಅರ್ಧ ಗಂಟೆಗೂ ಹೆಚ್ಚು ಕಾಲ ಫೋನ್ ಮೂಲಕ ಮಾತನಾಡಿದರು. ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ಕುರಿತು ಪ್ರಧಾನಿ ಮೋದಿಗೆ ಝಲೆನ್ ಸ್ಕಿ ವಿವರವಾಗಿ ವಿಸ್ತರಿಸಿದರು.

ಸಮಸ್ಯೆಗಳ ಕುರಿತು ಭಾರತ ಯಾವಾಗಲೂ ಶಾಂತಿಯುತವಾಗಿ ಬಗೆಹರಿಸಲು ಹಾಗೂ ಉಭಯ ದೇಶಗಳ ನಡುವೆ ನೇರ ಮಾತುಕತೆಯನ್ನು ಬೆಂಬಲಿಸುತ್ತದೆ. ಭಾರತೀಯರನ್ನು ಸ್ಥಳಾಂತರಿಸುತ್ತಿರುವ ಕುರಿತು ಧನ್ಯವಾದಗಳನ್ನು ಸಲ್ಲಿಸಿದ ಪ್ರಧಾನಿ ಮೋದಿ, ಇದೆ ರೀತಿ ಸ್ಥಳಾಂತರಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

ಫೆಬ್ರವರಿ 24ರಂದು ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲೆ ಯುದ್ಧ ಸಾರಿದರು. ಇದನ್ನು ವಿಶ್ವ ಸಮುದಾಯ ಖಂಡಿಸಿದೆ. ಕೆನಡಾ, ಅಮೆರಿಕ, ಬ್ರಿಟನ್ ಸೇರಿದಂತೆ ಅನೇಕ ರಾಷ್ಟ್ರಗಳು ರಷ್ಯಾವನ್ನು ನಿಷೇಧಿಸಿವೆ.




Leave a Reply

Your email address will not be published. Required fields are marked *

error: Content is protected !!