ನಾವು ಶಸ್ತ್ರತ್ಯಾಗ ಮಾಡಲ್ಲ: ಉಕ್ರೇನ್ ಅಧ್ಯಕ್ಷ ಝೆಲೆನಸ್ಕಿ

211

ಪ್ರಜಾಸ್ತ್ರ ಅಂತಾರಾಷ್ಟ್ರೀಯ ಸುದ್ದಿ

ಕೀವ್: ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಮುಂದುವರೆದಿದೆ. ಈ ಬಗ್ಗೆ ಮಾತನಾಡಿರುವ ಉಕ್ರೇನ್ ಅಧ್ಯಕ್ಷ ಝೆಲೆನಸ್ಕಿ, ನಾವು ಶಸ್ತ್ರತ್ಯಾಗ ಮಾಡುವುದಿಲ್ಲ. ನಮ್ಮ ದೇಶ ಹಾಗೂ ಸೈನಿಕರ ಮೇಲೆ ನಂಬಿಕೆಯಿದೆ. ನಾವು ಅದನ್ನು ರಕ್ಷಿಸುತ್ತೇವೆ ಎಂದಿದ್ದಾರೆ.

ಕೀವ್ ನಗರದ ಮೇಲೆ ರಷ್ಯಾ ಶೆಲ್ ದಾಳಿ ನಡೆಸಿದೆ. ಇದರಲ್ಲಿ ಇಬ್ಬರು ಮಕ್ಕಳು ಸೇರಿದಂತೆ 35 ಜನರು ಗಾಯಗೊಂಡಿದ್ದಾರೆ ಎಂದು ಕೀವ್ ಮೇಯರ್ ವಿಟಾಲಿ ತಿಳಿಸಿದ್ದಾರೆ. ಇದುವರೆಗೂ 198 ನಾಗರೀಕರು ಮೃತಪಟ್ಟಿದ್ದಾರೆ. ಇನ್ನು ಉಕ್ರೇನ್ ರಕ್ಷಣೆಗೆ ನಾಗರೀಕರು ಮುಂದೆ ಬರಬೇಕೆಂದು ಕರೆ ನೀಡಲಾಗಿದೆ. ಈಗ ಎಲ್ಲರೂ ದೇಶದ ರಕ್ಷಣೆಗೆ ನಿಂತಿದ್ದಾರೆ.




Leave a Reply

Your email address will not be published. Required fields are marked *

error: Content is protected !!