ಸಿಂದಗಿಯಲ್ಲಿ ಅಪರಿಚಿತ ಶವ ಪತ್ತೆ

363

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಸಂಗಮೇಶ್ವರ ದೇವಸ್ಥಾನದ ಹತ್ತಿರ ಅಪರಿಚಿತ ಶವವೊಂದು ಶನಿವಾರ ಪತ್ತೆಯಾಗಿದೆ. ಸುಮಾರು 60 ವರ್ಷದ ವ್ಯಕ್ತಿಯ ಶವವಾಗಿದ್ದು, ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೃತದೇಹವನ್ನು ತಾಲೂಕು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ವಾರಸುದಾರರ ಪತ್ತೆ ಕಾರ್ಯವನ್ನು ಪೊಲೀಸರು ನಡೆಸಿದ್ದಾರೆ. ಮೃತನ ಸಂಬಂಧಿಕರು ಯಾರದರೂ ಇದರೆ ಸಿಂದಗಿ ಪೊಲೀಸ್ ಠಾಣೆಗೆ(9480804257, 08488221333) ಸಂಪರ್ಕಿಸಬೇಕೆಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!